ಅಕ್ರಮ ಹಳೆನೋಟುಗಳ ಚಲಾವಣೆ ➤ ಆರೋಪಿಗಳ ಬಂಧನ

(ನ್ಯೂಸ್  ಕಡಬ) newskadaba.com ಬೆಂಗಳೂರು, ಡಿ. 30. ಹಳೆಯ ನೋಟುಗಳನ್ನು ಅಕ್ರಮವಾಗಿ ಚಲಾವಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಬಂಧಿತರನ್ನು ಯೋಗಾನಂದ, ವೆಂಕಟ ಹಾಗೂ ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 500 ರೂ. ಮುಖಬೆಲೆಯ 88 ಲಕ್ಷ ಮೊತ್ತದ ಹಳೆಯ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮೊದಲು 40 ಲಕ್ಷ ರೂಗಳ ಚಲಾವಣೆಗೆ ತಂದಿರುವುದಾಗಿ ಹೇಳಿದ್ದು, ತನಿಖೆಯ ವೇಳೆ ಮತ್ತೆ 48 ಲಕ್ಷ ರೂ. ಮೊತ್ತದ ಹಳೆಯ ನೋಟಿನ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆದರೆ ಈ ನೋಟುಗಳನ್ನು ಎಲ್ಲಿಂದ ತಂದಿದ್ದರು ಎನ್ನುವ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

Scroll to Top