ಕಡಬ : ಕೇಂದ್ರ ಜುಮಾ ಮಸೀದಿ ಪದಾಧಿಕಾರಿಗಳ ಆಯ್ಕೆ ➤ ಅಧ್ಯಕ್ಷರಾಗಿ ಮಹಮ್ಮದ್ ಶರೀಫ್, ಪ್ರ.ಕಾರ್ಯದರ್ಶಿಯಾಗಿ ಮಹಮ್ಮದ್ ಫೈಝಲ್

(ನ್ಯೂಸ್ ಕಡಬ) newskadaba.comಕಡಬ, ಡಿ.29.  ಬರ್ಕತುಲ್ ಇಸ್ಲಾಂ ಮುಹೀದ್ದೀನ್ ಕೇಂದ್ರ ಜುಮಾ ಮಸೀದಿ ಕಡಬ ಇದರ ಮಹಾಸಭೆಯು ಸೈಯದ್ ಝೈನುಲ್ ಹಬೀದೀನ್ ಜಮಾಲುಲೈಲು ತಂಞಳ್ ಕಾಜೂರು ಇವರ ಅಧ್ಯಕ್ಷತೆಯಲ್ಲಿ ಡಿ.22 ರಂದು ನಡೆದಿದ್ದು, ಈ ಸಭೆಯಲ್ಲಿ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಮಹಮ್ಮದ್ ಶರೀಫ್ ಕೇಪು, ಗೌರವಾಧ್ಯಕ್ಷರಾಗಿ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಉಪಾಧ್ಯಕ್ಷರಾಗಿ ಇಬ್ರಾಹಿಂ ಕೋಡಿಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಫೈಝಲ್ ಎಸ್.ಇ.ಎಸ್. ಜತೆ ಕಾರ್ಯದರ್ಶಿಯಾಗಿ ಶೇಖ್ ಮಹಮ್ಮದ್ ಕಲ್ಲುಗುಡ್ಡೆ, ಖಜಾಂಜಿಯಾಗಿ ಇಕ್ಬಾಲ್ ಕೇಪು ಸದಸ್ಯರುಗಳು ಆದಂ ಕುಂಡೋಳಿ, ಅಕ್ಬರ್ ಸಾಹೇಬ್ ಕೇಪು, ಹಮೀದ್ ಹಾಜಿ ಎಚ್.ಕೆ. ಶುಕೂರು ಅಡ್ಡಗದ್ದೆ, ಮಹಮ್ಮದ್ ಶರೀಫ್ ಅಡ್ಡಗದ್ದೆ, ಇಬ್ರಾಹಿಂ ಪೊರಂತುರವರುಗಳು ಆಯ್ಕೆಯಾಗಿದ್ದಾರೆ.

Scroll to Top