(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 28. ಟ್ರೇಡ್ ಮಾರ್ಕ್ ದುರುಪಯೋಗ ಹಾಗೂ ನಕಲಿ ಔಷಧ ಮಾರಾಟ ಸೇರಿದಂತೆ ವಿವಿಧ ವಿಚಾರಗಳ ಪರಿಶೀಲನೆಗಾಗಿ ಫಾರ್ಮಾ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಆರೋಗ್ಯ ಸಚಿವಾಲಯವು ಮುಂದಾಗಿದೆ.
ಟ್ರೇಡ್ ಮಾರ್ಕ್ ಉಲ್ಲಂಘನೆ, ದುರುಪಯೋಗ, ನಕಲಿ ಔಷಧಗಳ ಮಾರಾಟ, ಇನ್ವಾಯ್ಸ್ ಗಳಿಲ್ಲದೆ ಕಚ್ಚಾ ವಸ್ತುಗಳ ಖರೀದಿ, ಗುಣಮಟ್ಟದ ಅನುಸರಣೆ ಸಮಸ್ಯೆ, ನಕಲಿ ಔಷಧಿ ತಯಾರಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಪರಿಶೀಲಿಸಲು ಈ ದಾಳಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಸದ್ಯ ಸಚಿವಾಲಯವು ದಾಳಿಗಾಗಿ ಈಗಾಗಲೇ ಆರು ತಂಡಗಳನ್ನು ರಚಿಸಿ, ನಂತರದ ಕ್ರಮಗಳ ಮೇಲ್ವಿಚಾರಣೆಗಾಗಿ ಕೇಂದ್ರ ಔಷಧ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಝೇಶನ್ ಎಂಬ ಔಷಧ ನಿಯಂತ್ರಕ ಸಂಸ್ಥೆಯಲ್ಲಿ ಜಂಟಿ ಔಷಧ ನಿಯಂತ್ರಕರನ್ನೂ ನೇಮಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಈ ದಾಳಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ವಿವಿಧೆಡೆ ದಾಳಿಗೆ ಯೋಜಿಸಲಾಗಿದೆ.