ಯುವಕನ ಎದೆ ಸೀಳಿ ಹೊರಬಂದ ರಾಡ್ ➤ ಯುವಕ ಗಂಭೀರ

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಡಿ. 28. ಕಾರ್ಮಿಕನೋರ್ವನ ಎದೆ ಸೀಳಿ ಕಬ್ಬಿಣದ ರಾಡ್ ಹೊರ ಬಂದ ಪರಿಣಾಮ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ಜಿಲ್ಲೆಯ ಹೊಸೂರು ಸರ್ಕಲ್ ಬಳಿ ವರದಿಯಾಗಿದೆ.

ಗಾಯಾಳುವನ್ನು ಕೋಲ್ಕತ್ತಾ ಮೂಲದ ಅಬ್ದುಲ್ ಗಫರ್ ಎಂಬ ಗುರುತಿಸಲಾಗಿದೆ. ನಗರದ ಹೊಸೂರು ಸರ್ಕಲ್ ಬಳಿ ಫ್ಲೈ ಓವರ್ ಕೆಲಸ ಮಾಡುವಾಗ ಮೇಲಿಂದ ಕಬ್ಬಿಣದ ರಾಡ್ ಗಫರ್ ​ನ ಬಲಗಡೆಯ ಎದೆ ಭಾಗಕ್ಕೆ ಬಿದ್ದು, ಎದೆ ಸೀಳಿ ಹೊರ ಹೋಗಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ತಕ್ಷಣ ಅಬ್ದುಲ್​ನನ್ನು ಇತರ ಕಾರ್ಮಿಕರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

Scroll to Top