(ನ್ಯೂಸ್ ಕಡಬ) newskadaba.com ಬಜ್ಪೆ, ಡಿ. 27. ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿಯೋರ್ವ ಕಾಲುಜಾರಿ ಮೃತಪಟ್ಟ ಘಟನೆ ಬಜ್ಪೆಯಲ್ಲಿ ನಡೆದಿದೆ.
ಮೃತರನ್ನು ಕೊಳಂಬೆ ತಲ್ಲದಬೈಲು ನಿವಾಸಿ ಪದ್ಮನಾಭ ಬೆಲ್ಚಡ ಎಂದು ಗುರುತಿಸಲಾಗಿದೆ. ಬಜ್ಪೆಯಲ್ಲಿ ಮದ್ಯದಂಗಡಿ ಹೊಂದಿದ್ದ ಇವರು, ಸೆಕ್ಷನ್ ಜಾರಿಯಲ್ಲಿದ್ದ ಹಿನ್ನೆಲೆ ಮನೆಯಲ್ಲೇ ಇದ್ದು, ಬೆಳಗ್ಗೆ ಏಳು ಗಂಟೆಯ ವೇಳೆಗೆ ಬಾವಿ ಬಳಿ ತೆರಳಿದಾಗ ಆಕಸ್ಮಿಕವಾಗಿ ಬಿದ್ದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also Read ಈ ರಾಶಿಯವರನ್ನು ನೀವು ಮದುವೆ ಆದರೆ….? ನಿಮ್ಮ ಅದೃಷ್ಟವೇ ಬದಲಾಗಲಿದೇ ನೀವು ಅಂದುಕೊಂಡಂತೆ ಜೀವನ ನಡೆಸಬಹುದು.