ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿದ ಪ್ರೀತಿ ➤ ಯುವತಿಯ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ಸಾಮಾಜಿಕ ಜಾಲತಾಣದಲ್ಲಿ ಅರಳಿದ ಪ್ರೀತಿ ಯುವತಿ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಹುಚ್ಚು ಪ್ರಿಯಕರ ತನ್ನ ಪ್ರೇಯಸಿಯನ್ನು ಕೊಂದು ಇದೀಗ ಪ್ರೇಮ ಪಕ್ಷಿಯಾಗಬೇಕಿದ್ದವನು ಜೈಲು ಹಕ್ಕಿಯಾಗಿದ್ದಾನೆ. ಮೂಗಿನ ಕೆಳಗೆ ಇನ್ನೂ ಸರಿಯಾಗಿ ಮೀಸೆ ಚಿಗುರಿಲ್ಲ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ಹಂತಕ್ಕೂ ಏನು ಸಾಧನೆ ಮಾಡಿಲ್ಲ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡ್ತಾ ಫುಲ್ ಆಕ್ಟೀವ್ ಇದ್ದ. ಜೊತೆಗೆ ಇದೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕವಳನ್ನ ಬುಟ್ಟಿಗೆ ಹಾಕ್ಕೊಂಡಿದ್ದ. ಮುಂದೆ ಪಾಗಲ್ ಪ್ರೇಮಿಯಾಗಿ ಕೊನೆಗೆ ತನ್ನನ್ನ ನಿರಾಕರಿಸಿದಳು ಎಂದು ಜತೆಗಿದ್ದ ಯುವತಿಯ ಜೀವವನ್ನೇ ತೆಗೆಯುವ ಹಂತಕ್ಕೆ ಬಂದಿದ್ದಾನೆ.

Also Read  ‘ಇಂದಿರಾ ಗಾಂಧಿ ಭವನ’ ಉದ್ಘಾಟನೆ: ಜ.14-15ಕ್ಕೆ ದೆಹಲಿಗೆ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್

error: Content is protected !!
Scroll to Top