ರೂಪಾಂತರಿ ಕೊರೊನಾ ಆರ್ಭಟ ➤ ಹೊಸ ವರ್ಷಾಚರಣೆ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟಿಸುತ್ತಿದ್ದು, ಸಾವಿರಾರು ಜನರು ಸಾವನಪ್ಪುತ್ತಿದ್ದಾರೆ. ರೂಪಾಂತರಿ ಕೊರೊನಾ ಭಾರತಕ್ಕೂ ಕಾಲಿಡುತ್ತಿದೆ. ಇದರ ಮಧ್ಯೆ ಕ್ರಿಸ್​ಮಸ್ ಹಾಗೂ ಹೊಸ ವರ್ಷ ಬರುತ್ತಿದ್ದು, ಈ ಹಿನ್ನೆಲೆ ಸರ್ಕಾರ ಅಲರ್ಟ್ ಆಗಿದೆ. ಅದರಲ್ಲೂ ಬೆಂಗಳೂರು ಹೊರವಲಯದಲ್ಲಿ ಹೊಸವರ್ಷಾಚರಣೆ ಮೇಲೆ ಪೊಲೀಸ್​ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

 

ಹೊಸ ವರ್ಷಾಚರಣೆ ನೆಪದಲ್ಲಿ ಬೆಂಗಳೂರು ಹೊರವಲಯದಲ್ಲಿರುವ ರೆಸಾರ್ಟ್, ಹೋಟೆಲ್, ಹೋಂ ಸ್ಟೇಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಈ ವರ್ಷ ಇವುಗಳಿಗೆ ಬ್ರೇಕ್​ ಹಾಕಲು ಪೊಲೀಸ್​ ಇಲಾಖೆ ಮುಂದಾಗಿದ್ದು, ಹೊಸ ವರ್ಷ ಆಚರಣೆ ಪಾರ್ಟ್​ ಆಯೋಜಕರಿಗೆ ಕೆಲ ಮಾರ್ಗಸೂಚಿಗಳನ್ನ ಹೊರಡಿಸಿದೆ. ಈ ಬಗ್ಗೆ ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಬೆಂಗಳೂರು ಹೊರವಲಯದಲ್ಲಿ ಹೊಸವರ್ಷಾಚರಣೆ ಮೇಲೆ ನಿಗಾವಹಿಸುತ್ತೇವೆ. ಪ್ರತ್ಯೇಕವಾಗಿ ಪಾರ್ಟಿ ಆಯೋಜನೆ ಮಾಡುವ ಸ್ಥಳ ಪರಿಶೀಲಿಸುತ್ತೇವೆ. ಪಾರ್ಟಿ ಆಯೋಜಕರು, ಭಾಗಿಯಾಗುವವರ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದರು. ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆಯಾಗದಂತೆ ಕಣ್ಗಾವಲಿಡಲಾಗಿದ್ದು, ಯಾವುದೇ ಮಾದಕ ವಸ್ತು ಸರಬರಾಜು ಆಗದಂತೆ ನಿಗಾ ವಹಿಸಿದ್ದೇವೆ. ಅಲ್ಲದೇ ಪೊಲೀಸರು ಸ್ಪೆಷಲ್ ಡ್ರೈವ್ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

Also Read  ಕರಾವಳಿಯ ಜನಪದ ಕ್ರೀಡೆ ಕಂಬಳದ ಮೇಲೆ ಮತ್ತೆ ನಿಷೇಧದ ಆತಂಕ..!

 

error: Content is protected !!
Scroll to Top