ಕೋಲಾರ : ಬೀದಿನಾಯಿಗಳ ದಾಳಿ ; ಕೃಷ್ಣಮೃಗ ಬಲಿ

(ನ್ಯೂಸ್ ಕಡಬ) newskadaba.com  ಕೋಲಾರ , ಡಿ 23  :  ಬೀದಿನಾಯಿಗಳ ದಾಳಿಗೆ ಕೃಷ್ಣಮೃಗವೊಂದು ಬಲಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಚಿಟ್ನಹಳ್ಳಿ ಬಳಿ ಸಂಭವಿಸಿದೆ.

ಹೊಲದ ಬಳಿ ಬಂದಿದ್ದ ಗಂಡು ಕೃಷ್ಣಮೃಗದ ಮೇಲೆ ಸುಮಾರು 15 ಬೀದಿನಾಯಿಗಳು ಏಕಾಏಕಿ ದಾಳಿ ಮಾಡಿವೆ. ದಾಳಿಯಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನ ನಡೆಸಿದೆ ಗಾಯಗೊಂಡಿದ್ದರಿಂದ ಅದು ಸಾಧ್ಯವಾಗಲಿಲ್ಲ.  ಮೂರು ವರ್ಷದ ಕೃಷ್ಣಮೃಗ  ಸುಮಾರು 70 ಕೆ.ಜಿ ತೂಕವಿತ್ತು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಂತರ ಸುಗಟೂರು ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ  ಡಾ.ಶ್ರೀನಿವಾಸ ಗೌಡ ಮರಣೋತ್ತರ ಪರೀಕ್ಷೆ ನಡೆಸಿ ನಾಯಿಗಳ ದಾಳಿಯಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಅರಣ್ಯಾಧಿಕಾರಿ ವಾಸುದೇವ ಮೂರ್ತಿ, ಅರಣ್ಯ ರಕ್ಷಕ ಲೋಕೇಶ್ ಇದ್ದರು.

Scroll to Top