ಬಂಟ್ವಾಳ : ಮಾದಕ ವಸ್ತು ಮಾರಾಟ…!!!    ➤  ಇಬ್ಬರು ಆರೋಪಿಗಳ ಬಂಧನ          

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಡಿ.23.  ಮಾದಕ ವಸ್ತು ಎಂ.ಡಿ.ಎಂ.ಎ. ಸಾಗಾಟ ಮಾಡುತ್ತಿದ್ದ ಪ್ರಕರಣವೊಂದರಲ್ಲಿ ಬಂಟ್ವಾಳ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಿ.ಸಿ.ರೋಡ್ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳನ್ನು ಬಿಕಸ್ಟಾ ಗ್ರಾಮದ ಬಾರೆಕಾಡು ನಿವಾಸಿ ಇರ್ಷಾದ್  (25)  ಮತ್ತು ಕಾಸರಗೋಡು ಮಂಜೇಶ್ವರ ತಾಲೂಕಿನ ದೀಕ್ಷಿತ್ ಯಾನೆ ಅಪ್ಪೂಸ್ (19) ಎಂದು ಗುರುತಿಸಲಾಗಿದೆ.  ಬಂಟ್ವಾಳ ನಗರ ಠಾಣಾಧಿಕಾರಿ ಅವಿನಾಶ್ ಅವರು ಸಿಬ್ಬಂದಿ ಜೊತೆ ಗಸ್ತಿನಲ್ಲಿದ್ದ ವೇಳೆ ಸಂಜೆ ಸುಮಾರು ಸಂಜೆ 5 ಗಂಟೆಯ ವೇಳೆಗೆ  ಬಿ,ಮೂಡ ಗ್ರಾಮದ ಗೂಡಿನಬಳಿಗೆ ಹೋಗುವ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡಿಕೊಂಡಿರುವ ವೇಳೆ ನಾರಾಯಣಗುರು ವೃತ್ತದ ಕಡೆಯಿಂದ ಬಂದ ಆರೋಪಿಗಳಿಬ್ಬರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ನಿಲ್ಲಿಸಲು ಸೂಚಿಸಿ, ದಾಖಲಾತಿ ಕೇಳಿದಾಗ ಚಾಲಕನ ವರ್ತನೆಯಲ್ಲಿ ಅನುಮಾನ ಕಂಡು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಎಂಡಿಎಂಎ ನಿದ್ರಾಜನಕ ಸೊತ್ತನ್ನು ಸೇವಿಸಿರುವುದು ಗಮನಕ್ಕೆ ಬಂದಿದೆ.

Also Read  ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮತ್ತಷ್ಟು ನೀರಿನ ಪ್ರಮಾಣ ಇಳಿಕೆ

ಇರ್ಷಾದ್ ಬಳಿಯಿಂದ 4 ಗ್ರಾಮ್ ತೂಕ ಹಾಗೂ ದೀಕ್ಷಿತ್ ಬಳಿಯಿಂದ 5 ಗ್ರಾಮ್ ತೂಕದ ನಿದ್ರಾಜನಕ ಸೊತ್ತಾದ ಎಂಡಿಎಂಎ ಮಾತ್ರೆ ಇದ್ದು, ಸುಮಾರು 20 ಸಾವಿರ ಮೌಲ್ಯದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಎಂಡಿಎಂಎ ಸೊತ್ತು ಹಾಗೂ ರಿಕ್ಷಾಸಹಿತ ಬಂಧಿಸಿ ಪ್ರಕರಣ ದಾಖಲಿಸಲಾಯಿತು ಎಂದು ವರದಿ ಪ್ರಕಟಣೆ ತಿಳಿಸಿದೆ.

 

error: Content is protected !!
Scroll to Top