ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವವರೇ ಎಚ್ಚರ…!

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 22. ಬಿಸಿ ಬಿಸಿ ಅಡಿಗೆ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಯೆನಿಸುವುದಿಲ್ಲ. ಅವರು ಮತ್ತೆ ಮತ್ತೆ ಅದನ್ನು ಬಿಸಿ ಮಾಡ ತಿನ್ನುತ್ತಾರೆ. ಕೆಲವು ಪದಾರ್ಥಗಳನ್ನು ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಅಂತಹ ಕೆಲವು ಆಹಾರದ ಇಲ್ಲಿದೆ ನೋಡಿ.

 

ಪಾಲಕ್: ಪಾಲಕ್ ಸೊಪ್ಪನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚು. ಇದರಲ್ಲಿರುವ ನೈಟ್ರೇಟ್ ಅಂಶ ಮತ್ತೆ ಬಿಸಿ ಮಾಡಿದಾಗ ಕ್ಯಾನ್ಸರ್ ತರುವಂತಹ ಸತ್ವಗಳಾಗಿ ಮಾರ್ಪಾಡಾಗುತ್ತದೆ ಎನ್ನಲಾಗಿದೆ.

ಚಿಕನ್: ತಣ್ಣಗಾದ ಚಿಕನ್ ಅನ್ನು ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಅದರಲ್ಲಿನ ಪ್ರೊಟೀನ್ ಅಂಶ ಬದಲಾಗಿ, ಇದರಿಂದ ಪಚನಕ್ರಿಯೆಯ ಸಮಸ್ಯೆಗಳು ಉಂಟಾಗುತ್ತವೆ.

Also Read  ಆಹಾರದಲ್ಲಿ ಬಳಸಲಾದ ಬಣ್ಣಗಳು ಮತ್ತು ಅವುಗಳ ದೈಹಿಕ ಪರಿಣಾಮಗಳು - ಡಾ.ಅಜಿತ್ ಕೆ. ಕೋಡಿಂಬಾಳ

ಬೀಟ್ ರೂಟ್: ಇದರ ಖಾದ್ಯವನ್ನು ಬಿಸಿ ಮಾಡಿ ತಿನ್ನುವುದರಿಂದ ಅದರಲ್ಲಿನ ನೈಟ್ರೇಟ್ ನಾಶವಾಗುತ್ತದೆ. ಒಮ್ಮೆ ಬೀಟ್ ರೂಟ್ ಆಹಾರ ಹೆಚ್ಚಿದ್ದಲ್ಲಿ ಅದನ್ನು ಫ್ರಿಜ್ ನಲ್ಲಿಟ್ಟು ತಿನ್ನುವುದಕ್ಕೆ ಒಂದು ಗಂಟೆ ಮೊದಲು ಹೊರಗಿಟ್ಟು ನಂತರ ಬಿಸಿ ಮಾಡದೇ ಸೇವಿಸಿ.

ಅಣಬೆ: ಅಣಬೆ ಪ್ರೊಟೀನ್ ಗಳ ಆಗರವಾಗಿದೆ. ಇದನ್ನು ಫ್ರೆಶ್ ಆಗಿಯೇ ತಿನ್ನಬೇಕು. ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಮೊಟ್ಟೆ: ಮೊಟ್ಟೆಯನ್ನು ಎರಡನೇ ಬಾರಿ ಬಿಸಿ ಮಾಡಿ ತಿನ್ನುವುದರಿಂದ ಅದರಲ್ಲಿನ ಪ್ರೊಟೀನ್ ಗಳು ವಿಷಯುಕ್ತವಾಗುತ್ತವೆ.

ಆಲೂಗಡ್ಡೆ: ಆಲೂಗಡ್ಡೆ ನಾಲಿಗೆಗೆ, ದೇಹಕ್ಕೆ ಎರಡಕ್ಕೂ ಒಳ್ಳೆಯದು. ಆದರೆ ಇದನ್ನು ಬಹಳ ಸಮಯ ಇಟ್ಟು ತಿನ್ನಬಾರದು ಮತ್ತು ಬಿಸಿ ಮಾಡಲೂಬಾರದು. ಇದರಿಂದ ಪಚನಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

Also Read  ಅಧಿಕ ಉಪ್ಪಿನ ಬಳಕೆಯಿಂದ ದೂರವಿರಿ- ಹೃದಯವನ್ನು ಕಾಪಾಡಿ

error: Content is protected !!
Scroll to Top