ಮಧ್ಯರಾತ್ರಿಯಲ್ಲಿ ವಾಹನ ಚಲಾಯಿಸುವಾಗ ಭಯ ಹುಟ್ಟಿಸುತ್ತಾನೆ….ಈ ವ್ಯಕ್ತಿ!!!              

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 22. ಮಧ್ಯರಾತ್ರಿ ವೇಳೆ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಏಕೆಂದರೆ, ನಿಗೂಢ ವ್ಯಕ್ತಿಯೊಬ್ಬ ಮಧ್ಯರಾತ್ರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಹಾಕಿ  ಭಯ ಹುಟ್ಟಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ವ್ಯಕ್ತಿಯೊಬ್ಬರು ಟ್ವಿಟರ್​ನಲ್ಲಿ ವಿಡಿಯೋವನ್ನು ಹಂಚಿಕೊಂಡು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹದೇವಪುರ ಠಾಣಾ ಪೊಲೀಸರು ನಿಗೂಢ ವ್ಯಕ್ತಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹೆಡ್​ಫೋನ್ ಹಾಕಿ ಕೈಯಲ್ಲೊಂದು ಫೈಲ್ ಹಿಡಿದುಕೊಂಡು ರಸ್ತೆಗೆ ಅಡ್ಡಬಂದು ಎರಡೂ ಕೈಗಳನ್ನು ಚಾಚಿ, ಕಾರನ್ನು ನಿಲ್ಲಿಸುವಂತೆ ಸೂಚಿಸುತ್ತಾನೆ ಎನ್ನಲಾಗಿದೆ.

Also Read  ಯುಪಿಎಸ್ಸಿ 3ನೇ ಬಾರಿಗೆ ಬರೆದು ಐಎಎಸ್ ಅಧಿಕಾರಿಯಾದ ವಿಶಾಖಾ ಯಾದವ್

 

 

error: Content is protected !!
Scroll to Top