ಸುಳ್ಯ: ಕಾಡಾನೆ ಹಾವಳಿ ➤ ಅಪಾರ ಕೃಷಿ ನಾಶ- ಕೃಷಿಕರು ಹೈರಾಣು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 22. ಇಲ್ಲಿನ ಗಡಿಪ್ರದೇಶವಾದ ಮಂಡೆಕೋಲು ಗ್ರಾಮದ ಮುರೂರಿನಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಕೃಷಿ ಹಾನಿಯುಂಟಾದ ಘಟನೆ ವರದಿಯಾಗಿದೆ.


ಮುರೂರಿನ ಕೋಡೋತ್ ವಿಜಯನ್ ನಾಯರ್ ಎಂಬವರ ತೋಟಕ್ಕೆ ಕಳೆದ ರಾತ್ರಿ ನುಗ್ಗಿದ ಕಾಡಾನೆಗಳು ತೆಂಗಿನಮರ, ಅಡಿಕೆ ಮರ ಹಾಗೂ ಬಾಳೆಗಿಡಗಳನ್ನು ನಾಶಮಾಡಿದೆ. ಈ ಭಾಗದಲ್ಲಿ ಇತ್ತೀಚೆಗೆ ಬೀಡಿಬಿಟ್ಟಿರುವ ಕೃಷಿಯನ್ನು ನಾಶಪಡಿಸುತ್ತಿರುವುದರಿಂದ ಕೃಷಿಕರು ಹೈರಾಣಾಗಿದ್ದಾರೆ. ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿದ್ದರೂ, ಅದನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Also Read  ಉಪ್ಪಿನಂಗಡಿ: ಮಾನವೀಯತೆ ಮೆರೆದ ಸ್ಥಳೀಯರು

error: Content is protected !!
Scroll to Top