ವಿದ್ಯುತ್ ತಂತಿ ತಗುಲಿ 20 ಎಕರೆ ಕಬ್ಬು ಬೆಳೆ ಸಂಪೂರ್ಣ ನಾಶ

(ನ್ಯೂಸ್ ಕಡಬ) newskadaba.com ಮೈಸೂರು , ಡಿ 20 :  ವಿದ್ಯುತ್ ತಂತಿಯಿಂದ ಬೆಂಕಿ ತಗುಲಿ 20 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣ ನಾಶಗೊಂಡ ಘಟನೆ  ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬಾಳಹುಂಡಿ ಗ್ರಾಮದಲ್ಲಿ ಸಂಭವಿಸಿದೆ ಎನ್ನಲಾಗಿದೆ.

ಸುಬ್ರಹ್ಮಣ್ಯ ಮತ್ತು ನಾಗ ಎಂಬುವರಿಗೆ ಸೇರಿದ ಕಬ್ಬಿನ ಬೆಳೆ ಬೆಂಕಿಗೆ ಸಂಪೂರ್ಣ ನಾಶವಾಗಿದೆ. ಈ ಕಬ್ಬಿಗಾಗಿ ಸುಮಾರು 50 ಲಕ್ಷ ಖರ್ಚು ಮಾಡಿ 20 ಎಕರೆ ಜಮೀನಿನಲ್ಲಿ ಕಬ್ಬು ಬೆಳೆ ಬೆಳೆಯಲಾಗಿತ್ತು.  ಕಬ್ಬು ಚೆನ್ನಾಗಿ ಬೆಳೆದು ಕಟಾವಿಗೆ ಬಂದಿತ್ತು.  ಆಗ ಕಟಾವು ಮಾಡಲು ಬಂದಾಗ ಬೆಂಕಿ ತಗುಲಿದೆ ಅದೃಷ್ಟವಶಾತ್ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ರೈತ ಸುಬ್ರಮಣ್ಯ ಎಂಬುವರಿಗೆ ಸೇರಿದ 7 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗೆ  ಸಂಪೂರ್ಣವಾಗಿ  ನಾಶವಾಗಿದೆ. ಕೂಡಲೇ ಘಟನೆ ನಡೆದ ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಲು ಪ್ರಯತ್ನ ಮಾಡಿದರು. ಆದರೆ ಎಷ್ಟೇ ಪ್ರಯತ್ನ ಪಟ್ಟರು ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

Scroll to Top