ಬಾಲಕಿಯ ಜೊತೆ ಅಸಭ್ಯ ವರ್ತನೆ   ➤ ಹಿಗ್ಗಾ ಮುಗ್ಗಾ ಥಳಿಸಿದ ಪೋಷಕರು..!!!                

Crime

(ನ್ಯೂಸ್ ಕಡಬ) newskadaba.com  ಮಂಗಳೂರು, ಡಿ.18   ಅಪ್ರಾಪ್ತ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಮಂಗಳೂರಿನಲ್ಲಿ ಸಮಭವಿಸಿದೆ. ಯುವಕನನ್ನ ಕಂಬಕ್ಕೆ ಕಟ್ಟಿ ಬಾಲಕಿಯ ಕಡೆಯವರು ಹಲ್ಲೆ ಮಾಡಿದ್ದು,  ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಯುವಕ ಗಂಭೀರವಾಗಿ ಗಾಯಯೊಂಡಿದ್ದನು.  ಥಳಿತಕ್ಕೊಳಗಾದ ಯುವಕ ಬೈಕ್‌ನಲ್ಲಿ ಬಾಲಕಿಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದನು. ಬಾಲಕಿಯಿಂದ ಮಾಹಿತಿ ಪಡೆದು ಪೋಷಕರು ಹಿಂಬಾಲಿಸಿದ್ದರು.

ಕರೆಕಾಡು ಪ್ರದೇಶದಲ್ಲಿ ಯುವಕ ಮತ್ತೆ ಬಾಲಕಿಗೆ ಕಿರುಕುಳ ನೀಡಿದ್ದನು. ಈ ವೇಳೆ ಪೋಷಕರು ಹಾಗೂ ಜೊತೆಗಿದ್ದವರು ಯುವಕನ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ.  ಕಿರುಕುಳ ನೀಡುತ್ತಿದ್ದ ಯುವಕನ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದರು. ಬಳಿಕ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿ ತಿಳಿಸಿದೆ.

 

 

 

Scroll to Top