ಕೃಷ್ಣಾ ನದಿಯಲ್ಲಿ ಮುಳುಗಿ 5 ವಿದ್ಯಾರ್ಥಿಗಳು ಮೃತ್ಯು

(ನ್ಯೂಸ್‌ ಕಡಬ) newskadaba.com ಆಂಧ್ರಪ್ರದೇಶ, ಡಿ. 17. ಕೃಷ್ಣಾ ನದಿನೀರಿನಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

 

ಯನಮಲಕುದೂರು ಬಳಿ ಸ್ನಾನಕ್ಕೆಂದು ಏಳು ವಿದ್ಯಾರ್ಥಿಗಳು ನದಿಗೆ ಇಳಿದಿದ್ದು, ಐವರು ನೀರಿನಲ್ಲಿ ಮುಳುಗಿದ್ದಾರೆ ಇಬ್ಬರು ಬಾಲಕರು ಈಜಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಮೃತ ವಿದ್ಯಾರ್ಥಿಗಳೆಲ್ಲರು ವಿಜಯವಾಡದ ಪಟಮಾತಲಂಕಾ ಮೂಲದವರಾಗಿದ್ದು, ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಈವರೆಗೆ ಎರಡು ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಮೃತದೇಹಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂಧು ಅಧಿಕಾರಿಗಳು ತಿಳಿಸಿದ್ದಾರೆ

Also Read  ಆಸ್ಪತ್ರೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರ ಪತ್ರ ಕಡ್ಡಾಯ

error: Content is protected !!
Scroll to Top