(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶದ, ಡಿ. 16. ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.
ಆರತಿ ಕುಶ್ವಾಹ ಎಂಬ ಮಹಿಳೆಯು ನಾಲ್ಕು ಕಾಲುಗಳುಳ್ಳ ಮಗುವಿಗೆ ಜನ್ಮ ನೀಡಿದ್ದು, ಜನನದ ನಂತರ ಮಗುವಿನ ತೂಕ 2.3 ಕೆ.ಜಿಯಷ್ಟಿದ್ದು, ಶಿಶು ಆರೋಗ್ಯವಾಗಿದೆ ಎನ್ನಲಾಗಿದೆ. ಈ ಕುರಿತು ಸೂಪರಿಂಟೆಂಡೆಂಟ್ ಡಾ.ಆರ್.ಕೆ.ಎಸ್.ಧಕಡ್ ಮಾತನಾಡಿ, “ಮಗುವಿಗೆ ನಾಲ್ಕು ಕಾಲುಗಳಿದ್ದು, ಆಕೆಗೆ ದೈಹಿಕ ವಿಕಲತೆ ಇದೆ. ಬೆಳವಣಿಗೆ ಸಂದರ್ಭದಲ್ಲಿ ಕೆಲವು ಭ್ರೂಣಗಳು ಹೆಚ್ಚುವರಿಯಾಗುತ್ತವೆ, ಇದನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಭ್ರೂಣವು ಎರಡು ಭಾಗಗಳಾಗಿ ವಿಭಜನೆಯಾದಾಗ, ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ, ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ ಎಂದು ಹೇಳಿದ್ದಾರೆ.