ಬಲ್ಯ ಗ್ರಾಮದ ಹದಗೆಟ್ಟ ರಸ್ತೆಯ ದುಸ್ಥಿತಿ ➤ ಮತದಾನ ಬಹಿಷ್ಕರಿಸುವುದಾಗಿ ಬ್ಯಾನರ್ ಅಳವಡಿಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ. 16. ತಾಲೂಕಿನ ಬಲ್ಯ ಗ್ರಾಮದ ಬಹುತೇಕ ರಸ್ತೆಗಳು ಕೆಟ್ಟು ಹೋಗಿ ಸಂಚಾರಕ್ಕೆ ಅಡಚಣೆಯಾಗಿದ್ದು, ಇದರಿಂದಾಗಿ ಆ ಗ್ರಾಮದ ಜನತೆ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಬ್ಯಾನರ್ ಅಳವಡಿಸಿದ ಘಟನೆ ನಡೆದಿದೆ.

ಬಲ್ಯ ಗ್ರಾಮದ ದೇವತ್ತಡ್ಕ, ರಾಮನಗರ, ನೆಲ್ಲ, ಬನಾರಿ, ಮತ್ರಾಡಿ, ಕೋಡಿಯಡ್ಕ, ಪುಳಿತ್ತಡಿ, ನಾಲ್ಗುತ್ತು, ಪಾತ್ರಾಜೆ, ಕಲ್ಲೇರಿ, ಬಲ್ಯ ಶಾಲೆ, ಬಲ್ಯ- ಕೇರ್ಪುಡೆ ಮೊದಲಾದ ಸಂಪರ್ಕ ರಸ್ತೆಗಳು 15 ಕಿ.ಮೀ ಹೊಂದಿದ್ದು, ಈ ರಸ್ತೆಗಳು ದುರಸ್ತಿಯಾಗುವವರೆಗೆ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಗ್ರಾಮಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Also Read  ಅಪ್ರಾಪ್ತ ಬಾಲಕಿ ಬಟ್ಟೆ ಬದಲಿಸುವ ವೇಳೆ ವೀಡಿಯೋ ಮಾಡಿ ಬ್ಲ್ಯಾಕ್‌ಮೇಲ್ ➤ ಎರಡು ತಿಂಗಳಿನಿಂದ ನಿರಂತರ ಅತ್ಯಾಚಾರ, ಇಬ್ಬರ ಬಂಧನ

error: Content is protected !!
Scroll to Top