ಡಿಸೆಂಬರ್ 22 ರಿಂದ ಕರಾವಳಿ ಉತ್ಸವ ಆರಂಭ ► ದ.ಕ. ಜಿಲ್ಲಾಧಿಕಾರಿ ಶಶಿಕುಮಾರ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ನ.23. ಕರಾವಳಿ ಉತ್ಸವವು ಈ ವರ್ಷ ಡಿಸೆಂಬರ್ 22 ರಿಂದ 31ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಸಸಿಕುಮಾರ್ ಸೆಂಥಿಲ್‌ ತಿಳಿಸಿದ್ದಾರೆ.

ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ಉತ್ಸವ ವಿವಿಧ ಉಪಸಮಿತಿಗಳ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿಯ ಸಾಮಾನ್ಯ ಸಂಸ್ಕøತಿಗಳು ಕರಾವಳಿ ಉತ್ಸವದಲ್ಲಿ ಉತ್ಸವದಲ್ಲಿ ಪ್ರತಿಬಿಂಬವಾಗಬೇಕು. ಇಲ್ಲಿನ ಜನತೆಯ ಉತ್ಸವವಾಗಿ ಮಾರ್ಪಾಡಬೇಕು. ಸ್ಥಳೀಯರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.

ಕರಾವಳಿ ಉತ್ಸವ ಡಿ.22ರಿಂದ ಆರಂಭವಾಗಲಿದ್ದು, ಅಂದು ನೆಹರು ಮೈದಾನದಿಂದ ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದವರೆಗೆ ವಿವಿಧ ಕಲೆ, ಸಂಸ್ಕøತಿ ಹಾಗೂ ಜನಪದ ವೈಭವಗಳನ್ನು ಬಿಂಬಿಸುವ ಆಕರ್ಷಕ ಸಾಂಸ್ಕøತಿಕ ಮೆರವಣಿಗೆ ಸಂಚರಿಸಲಿದೆ. ಬಳಿಕ ಕರಾವಳಿ ಉತ್ಸವ ಉದ್ಘಾಟನೆಯಾಗಲಿದೆ. ಈ ವರ್ಷ ಲಾಲ್‍ಬಾಗ್ ಹಾಗೂ ಕದ್ರಿ ಪಾರ್ಕ್ ಎರಡೂ ಕಡೆ ಎಲ್ಲಾ 10 ದಿನಗಳಲ್ಲೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Also Read  ಕೊಕ್ಕಡ: ಲಂಚಕ್ಕಾಗಿ ಬೇಡಿಕೆಯಿಟ್ಟ ಗ್ರಾ.ಪಂ. ಅಧ್ಯಕ್ಷ ಹಾಗೂ ಪಿಡಿಓ ಎಸಿಬಿ ಬಲೆಗೆ ► ವಂಚನೆಯ ಬಲೆಯಲ್ಲಿ ಸಿಲುಕಿಸಲು ಲಂಚ ಬೇಡಿಕೆಯ ಆರೋಪ - ಗ್ರಾ.ಪಂ. ಅಧ್ಯಕ್ಷ

ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಮತ್ತು ಕಲಾ ಪ್ರಕಾರಗಳಿಗೆ ಆದ್ಯತೆ ನೀಡಲಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯಕ್ರಮಗಳು ನಡೆಯಲಿವೆ. ನಾಗರೀಕರ ಅಭಿರುಚಿಗೆ ತಕ್ಕಂತೆ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಡಾ. ಸಸಿಕುಮಾರ್ ಸೆಂಥಿಲ್ ತಿಳಿಸಿದರು.

ಕೊನೆಯ ಮೂರು ದಿನಗಳಲ್ಲಿ ಪಣಂಬೂರು ಬೀಚ್‍ನಲ್ಲಿ ಬೀಚ್ ಉತ್ಸವ ಏರ್ಪಡಿಸಲಾಗಿದೆ. ಇಲ್ಲಿ ಆಕರ್ಷಕ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಕರಾವಳಿ ಉತ್ಸವ ಸಮಾರೋಪವು ಡಿಸೆಂಬರ್ 31ರಂದು ಪಣಂಬೂರು ಬೀಚ್‍ನಲ್ಲಿಯೇ ನಡೆಯಲಿದೆ. ಕರಾವಳಿ ಉತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಉಪಸಮಿತಿಗಳು ಯೋಜನೆ ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ವಿವಿಧ ಇಲಾಖಾಧಿಕಾರಿಗಳು, ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Also Read  ಪ್ಯಾರಾಲಿಂಪಿಕ್ಸ್: ನಿಶಾದ್ ಕುಮಾರ್ ಗೆ ಬೆಳ್ಳಿ ಪದಕ- ಪ್ರೀತಿ ಪಾಲ್ ಗೆ ಕಂಚಿನ ಪದಕ

error: Content is protected !!
Scroll to Top