ಬೆಳ್ತಂಗಡಿ: ತಂಬಾಕು ನಿಯಂತ್ರಣ ಕಾಯ್ದೆಯಡಿ ತನಿಖಾದಳದಿಂದ ಕಾರ್ಯಾಚರಣೆ ➤ 26 ಪ್ರಕರಣ, 3800ರೂ. ದಂಡ ವಸೂಲಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 15. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರ ನಿರ್ದೇಶನದಂತೆ  ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತನಿಖಾದಳವು ಬೆಳ್ತಂಗಡಿ ತಾಲೂಕಿನ ಪಂಜಲ್ ಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲಾಡಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದೆ.

 

ಅಲ್ಲಿನ ಶಾಲಾ ಆವರಣದಿಂದ 100 ಗಜಗಳ ಅಂತರದಲ್ಲಿನ ಅಂಗಡಿ, ಮುಂಗಟ್ಟುಗಳಿಗೆ ತೆರಳಿ ಪರಿಶೀಲನೆ ನಡೆಸಿ ತಂಬಾಕು ಪದಾರ್ಥಗಳನ್ನು ಕೋಟ್ಪಾ-2003 ಸೆಕ್ಷನ್ 6ಬಿ ಉಲ್ಲಂಘಿಸಿ ಮಾರಾಟ ಮಾಡುವವರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಷನ್-4ಅನ್ನು ಉಲ್ಲಂಘಿಸಿದವರಿಗೆ ಕಾಯ್ದೆ ಬಗ್ಗೆ ವಿವರಿಸಿ, ದಂಡ ವಿಧಿಸಿ, ಪುನಾರವರ್ತಿಸದಂತೆ ಎಚ್ಚರಿಸಲಾಯಿತು. ಅಂಗಡಿ ಮುಂದೆ ಕಡ್ಡಾಯವಾಗಿ ಧೂಮಪಾನ ನಿಷೇಧಿಸಿದೆ ಎಂಬ ನಿಗದಿತ ನಾಮಫಲಕ ಪ್ರದರ್ಶಿಸುವಂತೆ ತಿಳಿಸಲಾಯಿತು. ಕಾರ್ಯಾಚರಣೆಯಲ್ಲಿ ಒಟ್ಟು 26 ಪ್ರಕರಣ ದಾಖಲಿಸಿ, 3,800 ರೂ.ಗಳ ದಂಡ ವಿಧಿಸಲಾಯಿತು.

Also Read  ಶಿಶಿಲ: ವ್ಯಕ್ತಿಗಳಿಬ್ಬರ ನಡುವೆ ಮಾರಾಮಾರಿ ➤ ಓರ್ವನಿಗೆ ಗಾಯ

 

error: Content is protected !!
Scroll to Top