“ಬಾಲಕಿಗೆ ಆಸಿಡ್ ಎರಚಿದವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ” ➤ ಗೌತಮ್ ಗಂಭೀರ್ ಒತ್ತಾಯ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 15. ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಆ್ಯಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಸಂಸದ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ.

ಬಾಲಕಿಯು ತನ್ನ ಸಹೋದರಿಯೊಂದಿಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾಲಕನೊಬ್ಬ ಆ್ಯಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ ಅವರು, ಈ ರೀತಿ ಕೃತ್ಯ ಎಸಗುವವರಿಗೆ ಭಯ ಹುಟ್ಟು ಹಾಕಬೇಕಾದ ಅಗತ್ಯವಿದೆ. ಇಂತಹ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದಲ್ಲಿ ಮಾತ್ರ ಭಯ ಹುಟ್ಟಿಸಲು ಸಾಧ್ಯ ಎಂದರು.

Also Read  ಬೆಳ್ತಂಗಡಿ: ತಂದೆಯನ್ನೆ ಹತ್ಯೆಗೈದ ಪಾಪಿ ಪುತ್ರ

error: Content is protected !!
Scroll to Top