ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮುಲ್ಕಿ, ಡಿ. 14. ಅಕ್ರಮವಾಗಿ 50 ಕ್ವಿಂಟಾಲ್ ಗಿಂತಲೂ ಅಧಿಕ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಕ್ಕಿ ಹಾಗೂ ಲಾರಿ ಸಹಿತ ವಶಕ್ಕೆ ಪಡೆದ ಘಟನೆ ಮುಲ್ಕಿಯಲ್ಲಿ ನಡೆದಿದೆ.

ಬಂಧಿತರನ್ನು ಬಂಟ್ವಾಳ ನಿವಾಸಿಗಳಾದ ಸಮೀರ್ ಮತ್ತು ಯಾಸಿರ್ ಎಂದು ಗುರುತಿಸಲಾಗಿದೆ. ಇವರು ಮುಲ್ಕಿಯ ಬಳ್ಕುಂಜೆ ಕಡೆಯಿಂದ ಮೈಸೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವೇಳೆ ಗಸ್ತು ನಿರತರಾಗಿದ್ದ ಪೊಲೀಸರು ತಡೆದು ಕೇಳಿದಾಗ ಚಾಲಕ ಗೊಬ್ಬರ ಎಂದು ಹೇಳಿದ್ದು, ಇದರಿಂದ ಸಂಶಯಗೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ ಅಕ್ಕಿ ಸಾಗಾಟ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಲಾರಿ, 50 ಕ್ವಿಂಟಾಲ್ ಪಡಿತರ ಅಕ್ಕಿ ಸಹಿತ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.

Also Read  ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ತ್ವರಿತ ಅರ್ಜಿ ವಿಲೇವಾರಿ ► ಕಡಬ ನಾಡಕಛೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ದ್ವಿತೀಯ

error: Content is protected !!