ರಾಮಕುಂಜ: ಕೆರೆ ನೀರಿಗೆ ಬಿದ್ದ ಕಾಡುಕೋಣ..!

(ನ್ಯೂಸ್ ಕಡಬ) newskadaba.com ರಾಮಕುಂಜ, ಡಿ. 13. ಕಾಡುಕೋಣವೊಂದು ಕೆರೆ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಘಟನೆ ವರದಿಯಾಗಿದೆ.

 

ಕೆರೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಕಾಡುಕೋಣವನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದು, ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಕೆರೆಯ ಒಂದು ಭಾಗದ ಮಣ್ಣು ಜರಿದು ಕಾಡುಕೋಣ ಮೇಲಕ್ಕೆ ಬರಲು ದಾರಿಮಾಡಿಕೊಟ್ಟರು. ಮೇಲೆ ಬಂದ ಕಾಡುಕೋಣ ತೋಟದ ಮಧ್ಯೆ ಓಡಿ ಕಾಡಿನತ್ತ ತೆರಳಿದೆ ಎಂದೆನ್ನಲಾಗಿದೆ.

error: Content is protected !!
Scroll to Top