ದಲಿತ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಿನ್ನಲೆ ➤ ದಲಿತ ಸಂಘಟನೆಯಿಂದ ಹೊಸ ಹೆಜ್ಜೆ

(ನ್ಯೂಸ್ ಕಡಬ ) newskadaba. com ಕುರುಗೋಡು, ಡಿ.10.ಶಿಕ್ಷಣದಿಂದ ಹಿಂದುಳಿದ ಗ್ರಾಮೀಣ ಭಾಗದಲ್ಲಿರುವ  ವಿವಿಧ  ಸಮುದಾಯದ ಮಕ್ಕಳಿಗೆ ರಾತ್ರಿ ಶಾಲೆ ಆರಂಭಿಸುವ ಕುರಿತು ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನಾ ಪದಾಧಿಕಾರಿ್ಗಳು ಹೊಸ ಹೆಜ್ಜೆ ಇಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಳ ಸಮುದಾಯದ  ಮಕ್ಕಳು ಶಿಕ್ಷಣ ಪಡೆಯುವ ಆಸಕ್ತಿ ಇದ್ದರೂ , ಆರ್ಥಿಕ ಪರಿಸ್ಥಿತಿಯಿಂದಾಗಿ  ಶಿಕ್ಷಣದಿಂದ ವಂಚಿ್ತರಾಗಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳಿಗೆ ಸೌಲಭ್ಯವಿದ್ದರೂ ಶಿಕ್ಷಣದ ಕೊರತೆ ಕಾಡುತ್ತದೆ.ಎಷ್ಟೇ ಹಣ ಹಾಕಿದರೂ ಉತ್ತಮ ಶಿಕ್ಷಣ ಮಕ್ಕಳಿಗೆ ಸಿಗುವುದು ಕಷ್ಟಕರ  ಇಂತಹ ಸಂದರ್ಭದಲ್ಲಿ ಸಂಘಟನೆಯೊಂದು ಸಿರಿಗೇರಿ ಗ್ರಾಮದ ಭವನದಲ್ಲಿ ರಾತ್ರಿ ಶಾಲೆ ಆರಂಭಿಸಿದೆ. ಇಲ್ಲಿ ಮಕ್ಕಳಿಗೆ ಇಚಿತ ಶಿಕ್ಷಣ ಕೊಡಿಸಲು ಮುಂದಾಗಿದೆ. ಇಲ್ಲಿ1ರಿಂದ 8ನೇ ತರಗತಿಯ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.

Scroll to Top