ಆಭರಣ ಉತ್ಪಾದನಾ ಘಟಕದಿಂದ ಕಳ್ಳತನ ➤ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com  ಮಂಗಳೂರು ಡಿ.10  ಆಭರಣ ಉತ್ಪಾದನಾ ಘಟಕದಿಂದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ವ್ಯಕ್ತಿಯನ್ನು ಬಂಧಿಸಲಾದ ಘಟನೆ ವರದಿಯಾಗಿದೆ.

ಬಂಧಿತ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಮೇದಿನಿಪರ ಜಿಲ್ಲೆಯ ಸುಭಾಶಿಶ್ ಬೇರಾ(38) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಭರಣ ತಯಾರಿಕಾ ಘಟಕದ ಮಾಜಿ ಕೆಲಸಗಾರನಾಗಿದ್ದ ಬೇರಾ ಮುಖ್ಯ ಬಾಗಿಲು ಒಡೆದು ಒಳಗಿದ್ದ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

Also Read  ನಟ ನಾಗಭೂಷಣ್ ಅವರ ಕಾರು ಢಿಕ್ಕಿ- ಮಹಿಳೆ ಮೃತ್ಯು

ಆರೋಪಿಯನ್ನು ಬಂಧಿಸಿದಾಗ ಇರಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಬಾವಿಗೆ ಎಸೆದಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.

 

 

error: Content is protected !!
Scroll to Top