ಬಂಟ್ವಾಳ: ಸಿಮೆಂಟ್ ಮಿಶ್ರಣದ ಲಾರಿ ಮನೆಯಂಗಳಕ್ಕೆ ಪಲ್ಟಿ..! ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 10. ಸಿಮೆಂಟ್ ಮಿಶ್ರಣ ಮಾಡುವ ಲಾರಿಯೊಂದು ಮನೆಯಂಗಳಕ್ಕೆ ಬಿದ್ದ ಪರಿಣಾಮ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಂಟ್ವಾಳದ ಕುಮ್ಡೇಲು ಎಂಬಲ್ಲಿ ನಡೆದಿದೆ.

 

ಕುಮ್ಡೆಲು ಎಂಬಲ್ಲಿ ಎದುರಿನಿಂದ ಬಂದ ವಾಹನವೊಂದಕ್ಕೆ ಸೈಡ್ ಕೊಡುವ ಭರದಲ್ಲಿ ರಸ್ತೆಯ ಬದಿಗೆ ಸರಿದ ಲಾರಿಯು ನಿಯಂತ್ರಣ ಕಳೆದುಕೊಂಡು ಮನೆಯಂಗಳಕ್ಕೆ ಉರುಳಿ ಬಿದ್ದಿದೆ. ಘಟನೆಯಿಂದ ಮನೆಯವರ ಕಂಪೌಂಡ್ ಜರಿದು ಬಿದ್ದು ನಷ್ಟ ಉಂಟಾಗಿದ್ದು, ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Scroll to Top