ಶಾಲಾ ವಾಹನ ಢಿಕ್ಕಿ ➤ ಪಾದಾಚಾರಿ ಸ್ಥಳದಲ್ಲೇ ಮೃತ್ಯು…!!!!

(ನ್ಯೂಸ್ ಕಡಬ) newskadaba.com  ಪುತ್ತೂರು, ಡಿ. 10. ಶಾಲಾ ವಾಹನ ಡಿಕ್ಕಿಯಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಎಂಬಲ್ಲಿ ಸಂಭವಿಸಿದೆ.

 

ಮೃತರನ್ನು ಕಾಪು ಮಲ್ಲಾರು ನಿವಾಸಿ ರವೀಂದ್ರನಾಥ ಶೆಟ್ಟಿರವರ ಪತ್ನಿ ಸಪ್ನ(54) ಎಂದು ಗುರುತಿಸಲಾಗಿದೆ. ಇವರು ದಿನಸಿ ಅಂಗಡಿಗೆ ತೆರಳಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮಂಗಳೂರಿನಿಂದ ಉಡುಪಿಗೆ ಚಲಿಸುತ್ತಿದ್ದ ಖಾಸಗಿ ವಿದ್ಯಾಸಂಸ್ಥೆಯ ವಾಹನ ಡಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

 

Scroll to Top