ಪುತ್ತೂರು: ನಿವೃತ್ತ ಎಎಸ್ಐ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ.21. ನಿವೃತ್ತ ಎಎಸ್ಐ ಓರ್ವರು ರಕ್ಷಿತಾರಣ್ಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ.

ಪುತ್ತೂರು ನಗರ ಠಾಣೆಯಲ್ಲಿ ಎಎಸ್ಐ ಯಾಗಿ ನಿವೃತ್ತಿ ಹೊಂದಿದ್ದ ಕುಂಜೂರು ಪಂಜ ನಿವಾಸಿ ಪರ್ಲಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶೇಷಪ್ಪ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಸೋಮವಾರದಂದು ತನ್ನ ಕುಂಜೂರು ಪಂಜದ ಮನೆಗೆ ಬಂದಿದ್ದು, ಮಂಗಳವಾರದಂದು ತನ್ನ ಪಂಚೆಯಿಂದ ನೇಣು ಬಿಗಿದ‌ ಘಟನೆ ಬೆಳಕಿಗೆ ಬಂದಿದೆ.

1986 ರಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕರ್ತವ್ಯ ಆರಂಭಿಸಿದ್ದ ಇವರು ವಿಟ್ಲ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

Also Read  ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯುತ್ತಿರುವಾಗಲೇ ► ಬಂಟ್ವಾಳದ ಸ್ಪರ್ಧಿ ಕುಸಿದು ಬಿದ್ದು ಮೃತ್ಯು

error: Content is protected !!
Scroll to Top