ವಿದ್ಯಾರ್ಥಿ ಮೇಲೆ ಪಿಟ್ಬುಲ್ ಡೆಡ್ಲಿ ಅಟ್ಯಾಕ್; ಕಿಮ್ಸ್ಗೆ ದಾಖಲು

ಹುಬ್ಬಳ್ಳಿ: ಪಿಟ್​​ಬುಲ್ ಜಾತಿಯ ಸಾಕು ಶ್ವಾನ ಒಂದು  ಬಾಲಕನ ಮೇಲೆ ದಾಳಿ ಮಾಡಿರುವ ಘಟನೆ  ಹುಬ್ಬಳ್ಳಿಯ ಬಂಕಾಪುರ ಚೌಕ ಬಳಿ‌ಯ ಪಾಟೀಲ್ ಗಲ್ಲಿಯಲ್ಲಿ ನಡೆದಿದೆ.

ಪವನ್ ಅನಿಲ್‌ ದೊಡಮನಿ ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಟ್ಯೂಷನ್​ಗೆ ಹೋಗುತ್ತಿದ್ದ ವೇಳೆ ನಾಯಿ ದಿಢೀರ್ ಅಟ್ಯಾಕ್ ಮಾಡಿದೆ. ಗುರುಸಿದ್ದಪ್ಪ‌ ಚನ್ನೋಜಿ ಎಂಬವರಿಗೆ ಸೇರಿದ ಪಿಟ್ ಬುಲ್ ಶ್ವಾನ ದಾಳಿ ಮಾಡಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.

error: Content is protected !!
Scroll to Top