ವಿದ್ಯುತ್ ತಂತಿ ಸ್ಪರ್ಶಿಸಿ ಹಸು ಮತ್ತು ಮಹಿಳೆ ಸಾವು

ತುಮಕೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಹಸು ಹಾಗೂ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಲಕ್ಲಿಹಟ್ಟಿ ಗ್ರಾಮದಲ್ಲಿ ನಡೆದಿದೆ.

ರತ್ನಮ್ಮ 40 ಮೃತ ದುರ್ದೈವಿ. ವಿದ್ಯುತ್ ತಂತಿ ತಗಲಿ ಹಸು ಒದ್ದಾಡುತ್ತಿದ್ದು, ಅದನ್ನು ರಕ್ಷಿಸಲು ಹೋದ ಮಹಿಳೆಗೂ ವಿದ್ಯುತ್​ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹಸು ಮೇಯಿಸಲು ಹೋದಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.

Also Read  ಓಮ್ನಿ ಮೇಲೆ ಪಲ್ಟಿಯಾದ ಸರಕು ಸಾಗಾಟದ ಲಾರಿ..! ➤ ಚಾಲಕ ಗಂಭೀರ

 

 

error: Content is protected !!
Scroll to Top