ಕ್ಯೂ5 ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಆಡಿ

(ನ್ಯೂಸ್ ಕಡಬ) newskadaba.com ನ.15: ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಆಡಿ ಇಂಡಿಯಾ ಕಂಪನಿಯು ಕ್ಯೂ5 ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 67.05 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯು ಟೆಕ್ನಾಲಜಿ ವೆರಿಯೆಂಟ್ ಆಧರಿಸಿದ್ದು, ಹೊಸ ಕಾರಿನಲ್ಲಿ ವಿಶೇಷವಾಗಿ ಡಿಸ್ಟ್ರಿಕ್ಟ್ ಗ್ರಿನ್ ಮತ್ತು ಐಬಿಸ್ ವೈಟ್ ಬಣ್ಣಗಳ ಆಯ್ಕೆ ಹೊಂದಿರುತ್ತದೆ.

ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ತಾಂತ್ರಿಕ ಅಂಶಗಳನ್ನು ಹೊಂದಿರುವ ಸ್ಪೆಷಲ್ ಎಡಿಷನ್ ನಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್ ನೀಡಲಾಗಿದ್ದು, ಬ್ಲ್ಯಾಕ್ ಸ್ಟೈಲಿಂಗ್ ಹೊಂದಿರುವ ಬ್ರಾಂಡ್ ಲೊಗೊ ಆಕರ್ಷಕವಾಗಿದೆ. ವಿಶೇಷ ಮಾದರಿಯಾಗಿ ಕಂಪನಿಯು 19 ಇಂಚಿನ 5 ಸ್ಪೋಕ್, ವಿ ಸ್ಟೈಲ್, ಡೈಮಂಡ್ ಕಟ್ ಅಲಾಯ್ ವ್ಹೀಲ್, ಗ್ರಾಫೈಟ್ ಗ್ರೇ ಶೆಡ್ ಮತ್ತು ಎಲ್ಇಡಿ ಹೆಡ್ ಲೈಟ್ಸ್ ನೀಡಲಾಗಿದೆ. ಆಡಿ ಕಂಪನಿಯು ಹೊಸ ಕ್ಯೂ5 ಸ್ಪೆಷಲ್ ಎಡಿಷನ್ ನಲ್ಲಿ 2.0 ಲೀಟರ್ ಟರ್ಬೊ ಚಾರ್ಜ್ಡ್ ಫೋರ್ ಸಿಲಿಂಡರ್ ಎಂಜಿನ್ ನೀಡಿದ್ದು, ಇದು 249 ಹಾರ್ಸ್ ಪವರ್ ಮತ್ತು 370 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗಿದ್ದು, 6.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳುವುದರ ಜೊತೆಗೆ ಪ್ರತಿ ಗಂಟೆಗೆ 237 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

Also Read  ಏರ್ ಟೆಲ್ ನಿಂದ ಭರ್ಜರಿ ಆಫರ್

error: Content is protected !!
Scroll to Top