ಭಾರತದ ಅತಿ ಅಗ್ಗದ 5G ಸ್ಮಾರ್ಟ್​ಫೋನ್ Lava Blaze ಇಂದಿನಿಂದ ಖರೀಗೆ ಲಭ್ಯ

(ನ್ಯೂಸ್ ಕಡಬ) newskadaba.com ನ.15: ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿ ಸುದ್ದಿಯಾಗುವ ಭಾರತದ ಪ್ರಸಿದ್ಧ ಲಾವಾ ಕಂಪನಿ ದೇಶದಲ್ಲಿ ಊಹಿಸಲಾಗದ ಬೆಲೆಗೆ ಲಾವಾ ಬ್ಲೆಂಜ್‌ ಎಂಬ ಆಕರ್ಷಕ 5ಜಿ ಫೋನನ್ನು ಔಪಚಾರಿಕವಾಗಿ ಪರಿಚಯಿಸಿತ್ತು. ಕಳೆದ ತಿಂಗಳು ಅಕ್ಟೋಬರ್​ನಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಸಮಾವೇಶದಲ್ಲಿ ಕಂಪನಿಯು ಈ ಫೋನ್ ಅನ್ನು ಅನಾವರಣ ಮಾಡಿತ್ತು. ದೇಶದ ಅತಿ ಅಗ್ಗದ 5ಜಿ ಫೋನ್ ಎನಿಸಿಕೊಂಡಿರುವ ಈ ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಸಿಗಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್‌ ಮೂಲಕ ಮಾರಾಟ ಪ್ರಾರಂಭಿಸಲಿದೆ ಎಂದು ಲಾವಾ ಹೇಳಿಕೆ ನೀಡಿದೆ.

ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಕೇವಲ ಒಂದು ಮಾದರಿಯಲ್ಲಷ್ಟೆ ಖರೀದಿಗೆ ಸಿಗಲಿದೆ. ಇದರ 4GB RAM + 128GB ಸ್ಟೋರೇಜ್ ಮಾದರಿಗೆ ಕೇವಲ 9,999ರೂ. ಬೆಲೆಯನ್ನು ನಿಗದಿ ಮಾಡಲಾಗಿದೆ. ನವೆಂಬರ್ 15 ಇಂದಿನಿಂದ ಅಮೆಜಾನ್‌ನಲ್ಲಿ ಮೊದಲ ಸೇಲ್ ಶುರು ಮಾಡಲಿದೆ. ಇದು ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಇದು 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ.

Also Read  ಕೊಯಿಲ: ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ಲೂರು ಶಾಖೆ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ

ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ AI- ಬೆಂಬಲಿತ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿರುವ ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI, ಬ್ಯೂಟಿ, ಫಿಲ್ಟರ್‌ಗಳು, GIF, HDR, ಮ್ಯಾಕ್ರೋ, ಮೋಷನ್, ನೈಟ್, ಪನೋರಮಾ, ಪೋರ್ಟ್ರೇಟ್, ಸ್ಲೋ ಮೋಷನ್ ಟೈಮ್‌ಲ್ಯಾಪ್ಸ್ ನಂತಹ ವಿಭಿನ್ನ ಫೀಚರ್ಸ್‌ಗಳನ್ನು ಒಳಗೊಂಡಿದೆ.

Also Read  ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್.ರೈ ದಂಪತಿಯಿಂದ ಮುಗೇರು ದೇವಸ್ಥಾನಕ್ಕೆ ನೂತನ ವಸಂತಕಟ್ಟೆ ಸಮರ್ಪಣೆ

error: Content is protected !!
Scroll to Top