ದೆಹಲಿ: ಪ್ರಯಾಣಿಕನೊಬ್ಬ ಏರ್ಪೋರ್ಟ್ ಅಧಿಕಾರಿಗಳ ಕಣ್ತಪ್ಪಿಸಿ ಹಣ (Dubai currency) ಸಾಗಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವಂತಹ ಘಟನೆ ದೆಹಲಿಯಲ್ಲಿ ನಡೆದಿದೆ.
ದುಬೈನಿಂದ ದೆಹಲಿಗೆ ಆಗಮಿಸಿದ ಪ್ರಯಾಣಿಕನ ಬ್ಯಾಗ್ನಲ್ಲಿ ಬರೋಬ್ಬರಿ 40,500 ಸೌದಿ ರಿಯಲ್ಸ್ ಅಂದ್ರೆ 8.5 ಲಕ್ಷ ರೂಪಾಯಿ ಅಡಗಿಸಿ ಸಾಗಿಸುತ್ತಿದ್ದ. ಇಂದಿರಾಗಾಂಧಿ ಏರ್ಪೋರ್ಟ್ನಲ್ಲಿ ಪ್ರಯಾಣಿಕರನ್ನು ಏರ್ಪೋರ್ಟ್ ಗುಪ್ತಚರ ಇಲಾಖೆ ಮತ್ತು ಸಿಐಎಸ್ಎಫ್ ಅಧಿಕಾರಿಗಳು ಪರಿಶೀಲಿಸಿದ್ದಾರೆ.






