ವಾಚ್ಒಎಸ್ 9.1 ಬಿಡುಗಡೆ ಮಾಡಿದ ಆಪಲ್

(ನ್ಯೂಸ್ ಕಡಬ) newskadaba.com ನ.02:ಆಪಲ್ ಕಂಪನಿಯು ಆಪಲ್ ವಾಚ್‌ಗಾಗಿ ವಾಚ್ಒಎಸ್ 9.1 (watchOS 9.1) ಅಪ್‌ಡೇಟ್ ನೀಡಲು ಆರಂಭಿಸಿದೆ. ಆಪಲ್ ಮ್ಯೂಸಿಕ್‌ ನಿಂದ ಸಂಗೀತವನ್ನು ಡೌನ್‌ಲೋಡ್‌ಗೆ ಸಪೋರ್ಟ್ ಮಾಡುವುದು ಮತ್ತು ಬ್ಯಾಟರಿ ದೀರ್ಘ ಅವಧಿ ಬಾಳಿಕೆಯೊಂದಿಗೆ ಇತ್ತೀಚಿನ ಆವೃತ್ತಿಯಲ್ಲಿ ಕೆಲವು ಹೊಸ ಫೀಚರ್ಸ್‌ಗಳನ್ನು ಸೇರಿಸಲಾಗಿದೆ. ವಾಚ್ಓಎಸ್ 9.1ಗಾಗಿ ಬಿಡುಗಡೆ ಟಿಪ್ಪಣಿಗಳ ಪ್ರಕಾರ, ಜಾಗಿಂಗ್, ವಾಕಿಂಗ್ ಮತ್ತು ಟ್ರೆಕ್ಕಿಂಗ್ ಸೇರಿದಂತೆ ಹೊರಾಂಗಣ ಚಟುವಟಿಕೆಗಳಿಗೆ ಬ್ಯಾಟರಿ ಬಳಕೆಯನ್ನು ಆಪ್ಟಿಮೈಸ್ ಮಾಡಲಾಗಿದೆ. ಆಪಲ್ ವಾಚ್ ಸೀರೀಸ್ 8, ಆಪಲ್ ವಾಚ್ ವಾಚ್ ಎಸ್ಇ 2ನೇ ತಲೆಮಾರಿನ ಮತ್ತು Apple Watch Ultra ಬಳಕೆದಾರರಿಗೆ GPS ಮತ್ತು ಹೃದಯ ಬಡಿತದ ಟ್ರ್ಯಾಕಿಂಗ್‌ನ ಫ್ರಿಕ್ವೆನ್ಸಿ ಈಗ ಕಡಿಮೆ ಎನಿಸಬಹುದು.

Also Read  ಪುರುಷರಲ್ಲಿ ಪರಸ್ತ್ರೀಯರ ಕಂಟಕ ಹೇಗೆ ಬರುತ್ತದೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ

ಮತ್ತೊಂದು ಗಮನಾರ್ಹ ಎಂದರೆ, ನೀವು ಚಾರ್ಜ್ ಮಾಡದಿದ್ದಾಗ, ಆಪಲ್ ವಾಚ್ ಧರಿಸುವವರು ವೈ-ಫೈ ಅಥವಾ ಸೆಲ್ಯುಲಾರ್ ಮೂಲಕ ಆಪಲ್ ಮ್ಯೂಸಿಕ್‌ನಿಂದ ಸಂಗೀತವನ್ನು ಡೌನ್‌ಲೋಡ್ ಮಾಡಬಹುದು. ಬಳಕೆದಾರರು ಪ್ರಯಾಣ ಮಾಡುವಾಗಲೂ ಯಾವುದೇ ತೊಂದರೆ ಇಲ್ಲದೇ ಈಗ ತಮ್ಮ ಕೈಗಡಿಯಾರಕ್ಕೆ ಸಂಗೀತವನ್ನು ಡೌನ್‌ಲೋಡ್ ಮಾಡಬಹುದು. ಮೊದಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಇದೊಂದು ನಂಬಲಾರ್ಹ ಫೀಚರ್ ಎನಿಸಿಕೊಂಡಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಫೀಚರ್ಸ್‌ಗಳೊಂದಿಗೆ ಹೊಸ ಫೀಚರ್ಸ್‌ಗಳಿಂದಾಗಿ ವಾಚ್‌ಒಎಸ್ 9.1 ಹೆಚ್ಚು ಬಳಕೆದಾರರ ಸ್ನೇಹಿಯಾಗಿದೆ.

error: Content is protected !!
Scroll to Top