ಮಂಗಳೂರು: ಎಂಬಿಎ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿದ ರಾಟ್ ವೀಲರ್ ನಾಯಿ ► ನಾಯಿಯ ಮಾಲಕರ ವಿರುದ್ಧ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಮಂಗಳೂರು, ನ.18. ಕಾಲೇಜು ವಿದ್ಯಾರ್ಥಿಯೋರ್ವ ನಡೆದುಕೊಂಡು ಹೋಗುತ್ತಿದ್ದಾಗ ಸಾಕು ನಾಯಿಯೊಂದು ದಾಳಿ ನಡೆಸಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರದ ಪತ್ರಾವೋ ಲೇನ್ ನ ಮಹೇಂದ್ರ ಮ್ಯಾನರ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ ಕುಟುಂಬವೊಂದು ಸಾಕುತ್ತಿದ್ದ ರಾಟ್ ವೀಲರ್ ಜಾತಿಗೆ ಸೇರಿದ ನಾಯಿಯು ನಗರದ ಕಾಲೇಜೊಂದರ ಎಂಬಿಎ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿತ್ತೆನ್ನಲಾಗಿದೆ. ಈ ವೇಳೆ ವಿದ್ಯಾರ್ಥಿ ಬೊಬ್ಬೆ ಹಾಕಿದ್ದನ್ನು ಕೇಳಿ ನಾಯಿಯ ಮಾಲಕರು‌ ಹಾಗೂ ಸಾರ್ವಜನಿಕರು ಬಂದು ವಿದ್ಯಾರ್ಥಿಯನ್ನು ಕಾಪಾಡಿದ್ದಾರೆ. ಈ ಸಂದರ್ಭದಲ್ಲಿ ನಾಯಿಯ ಮಾಲಕರಲ್ಲಿ ನಾಯಿಯನ್ನು ಕಟ್ಟಿಹಾಕದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ವಿಚಾರಿಸಿದಾಗ ವಿದ್ಯಾರ್ಥಿಯನ್ನು ಅವ್ಯಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.

Also Read  ಬೆಳ್ತಂಗಡಿ: ವಿದ್ಯುತ್ ಶಾಕ್ ಗೆ ಎಸಿ ಮೆಕ್ಯಾನಿಕ್ ಬಲಿ

ಇದೀಗ ವಿದ್ಯಾರ್ಥಿಯು ನಾಯಿಯ ಮಾಲಕರ ವಿರುದ್ಧ ಬಂದರು ಠಾಣೆಗೆ ದೂರು ನೀಡಿದ್ದಾರೆ.

error: Content is protected !!
Scroll to Top