ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ “ನಥಿಂಗ್”

(ನ್ಯೂಸ್ ಕಡಬ) newskadaba.com ಅ.28: ಟೆಕ್ ಮತ್ತು ಗ್ಯಾಜೆಟ್ ಲೋಕದಲ್ಲಿ ಸದ್ದು ಮಾಡುತ್ತಿರುವ ನಥಿಂಗ್ ಕಂಪನಿ, ಹೊಸ ವಿನ್ಯಾಸದ ಇಯರ್‌ಬಡ್ಸ್ ಬಿಡುಗಡೆ ಮಾಡಿದೆ. ನಥಿಂಗ್ ಇಯರ್ ಸ್ಟಿಕ್ಸ್ ಹೆಸರಿನ ಇಯರ್‌ಬಡ್ಸ್ ನವೆಂಬರ್ 4ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ದೇಶದಲ್ಲಿ ನಥಿಂಗ್ ಇಯರ್‌ಬಡ್ಸ್ ₹8,499 ದರ ಹೊಂದಿದೆ. 4.4 ಗ್ರಾಂ ತೂಕದ ನಥಿಂಗ್ ಇಯರ್‌ಬಡ್ಸ್ ಸ್ಟಿಕ್, ವಿನ್ಯಾಸದ ಮೂಲಕ ಬಳಕೆದಾರರ ಗಮನ ಸೆಳೆಯಲಿದೆ ಎಂದು ಕಂಪನಿ ಹೇಳಿದೆ.

ಯುಎಸ್‌ಬಿ-ಸಿ ಚಾರ್ಜಿಂಗ್ ಪೋರ್ಟ್ ಮೂಲಕ ನಥಿಂಗ್ ಇಯರ್‌ಬಡ್ಸ್ ಕಾರ್ಯನಿರ್ವಹಿಸಲಿದೆ. 12.5ಎಂಎಂ ಡೈನಾಮಿಕ್ ಡ್ರೈವರ್ ಇದ್ದು, ಬಳಕೆದಾರರಿಗೆ ಗುಣಮಟ್ಟದ, ಹೆಚ್ಚು ಸ್ಪಷ್ಟ ಶಬ್ಧ, ಸಂಗೀತದ ಅನುಭವ ನೀಡಲಿದೆ. ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ, 7 ಗಂಟೆಗಳ ಕಾಲ ಇಯರ್‌ಬಡ್ಸ್ ಬಳಸಬಹುದು. ಅಲ್ಲದೆ, ಚಾರ್ಜಿಂಗ್ ಕೇಸ್ ಮೂಲಕ 29 ಗಂಟೆಗಳ ಚಾರ್ಜ್ ಲಭ್ಯವಾಗಲಿದೆ.

Also Read  ಅಡಿಗ ಟಿವಿಎಸ್ ಮೆಗಾ ಕಾರ್ನಿವಲ್ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤ ಮುಂಗಡ ಪಾವತಿ ಕೇವಲ ರೂ.9999 ಹಾಗೂ ರೂ.10,000/- ವರೆಗೆ ಕ್ಯಾಶ್ ಬ್ಯಾಕ್

error: Content is protected !!
Scroll to Top