(ನ್ಯೂಸ್ ಕಡಬ) newskadaba.com ಅ. 28: ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್ ನಡಿಯಲ್ಲಿ ಹೊಸ ಪವರ್ಫುಲ್ ಮೊಬೈಲ್ ಪರಿಚಯಿಸಿದೆ. ಅದುವೇ ರೆಡ್ಮಿ ನೋಟ್ 12 ಸರಣಿ. ಇದರಲ್ಲಿ ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ ಮತ್ತು ರೆಡ್ಮಿ ನೋಟ್ 12 ಪ್ರೊ+ (Redmi Note 12 Pro +) ಫೋನುಗಳಿವೆ. ಈ ಮೂರು ಸ್ಮಾರ್ಟ್ಫೋನ್ಗಳ ಪೈಕಿ ರೆಡ್ಮಿ ನೋಟ್ 12 ಪ್ರೊ+ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಇದು 2,400 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಬೆಂಬಲಿಸಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಹಾಗೆಯೆ ಈ ಸರಣಿಯ ರೆಡ್ಮಿ ನೋಟ್ 12 ಪ್ರೊ ಕೂಡ ಇದೆ ಪ್ರೊಸೆಸರ್ ಹೊಂದಿದೆ. ಆದರೆ ರೆಡ್ಮಿ ನೋಟ್ 12 ಸ್ನಾಪ್ಡ್ರಾಗನ್ 4 Gen 1 ಪ್ರೊಸೆಸರ್ನಿಂದ ಕೆಲಸ ಮಾಡುತ್ತದೆ. ಉಳಿದಂತೆ ಮೂರು ಫೋನಿನ ಡಿಸ್ ಪ್ಲೇ ಒಂದೇ ರೀತಿಯಿದೆ. ಇದರ ರೆಡ್ಮಿ ನೋಟ್ 12 5G ಆರಂಭಿಕ ಬೆಲೆ CNY 1,199, ಅಂದರೆ ಭಾರತದಲ್ಲಿ ಅಂದಾಜು 13,600ರೂ., ರೆಡ್ಮಿ ನೋಟ್ 12 ಪ್ರೊ 5G ಆರಂಭಿಕ ಬೆಲೆ CNY 1,699, ಅಂದರೆ ಭಾರತದಲ್ಲಿ ಅಂದಾಜು 19,300ರೂ., ರೆಡ್ಮಿ ನೋಟ್ 12 ಪ್ರೊ+ 5G ಆರಂಭಿಕ ಬೆಲೆ CNY 2,199, ಅಂದರೆ ಭಾರತದಲ್ಲಿ ಅಂದಾಜು 25,500ರೂ. ಎನ್ನಬಹುದು.