ಮಂಗಳೂರು: ಪಿಎಫ್ಐ ನಾಯಕರ ಮನೆ ಮೇಲೆ ಮತ್ತೆ ಪೊಲೀಸ್ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 13. ನಗರದ ವಿವಿಧೆಡೆ ಇರುವ ಪಿಎಫ್‌ಐ ಮತ್ತು ಎಸ್‌ಡಿಪಿಐ ನಾಯಕರ ಮನೆಗೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿ, ಮನೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.


ಪಣಂಬೂರು, ಉಳ್ಳಾಲ, ಬಜ್ಪೆ ಠಾಣಾ ವ್ಯಾಪ್ತಿಯ 9 ಕಡೆ ದಾಳಿ ನಡೆಸಿದ ಪೊಲೀಸರು, ಎಸ್‌ಡಿಪಿಐ ಜಿಲ್ಲಾಧ್ಯಕ್ಷರ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ವಿಶೇಷ ತಂಡಗಳನ್ನು ರಚಿಸಿ ಪೊಲೀಸರು ಈ ದಾಳಿ ನಡೆಸಿದ್ದು, ಈ ವೇಳೆ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಸೆಪ್ಟೆಂಬರ್ 27ರಂದು ಪೊಲೀಸರು ಇದೇ ರೀತಿಯ ದಾಳಿ ನಡೆಸಿದ್ದರು.

Also Read  ಕಾರು ಢಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರ ➤ ಬಸ್ಸಿನಡಿಗೆ ಬಿದ್ದು ಮೃತ್ಯು

error: Content is protected !!
Scroll to Top