(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 27. ಚಿಟ್ ಫಂಡ್‌ನಲ್ಲಿ 10 ಲಕ್ಷ ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವ ಮೂವರ ವಿರುದ್ಧ ದೂರು ದಾಖಲಿಸಿದ ಘಟನೆ ಸುರತ್ಕಲ್ ನ ಇಡ್ಯ ಗ್ರಾಮದಲ್ಲಿ ವರದಿಯಾಗಿದೆ.
ಸುರತ್ಕಲ್‌ನ ಇಡ್ಯ ಗ್ರಾಮದ ಫೈನಾನ್ಸ್ ಕಂಪನಿ ಮೂಲಕ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ಅಶೋಕ್ ಭಟ್, ವಿದ್ಯಾ ಮತ್ತು ಪ್ರಿಯಾಂಕಾ ಭಟ್ ಅವರು ಕೊಡಬೇಕಾದ 10 ಲಕ್ಷ ರೂಪಾಯಿ ನೀಡಿಲ್ಲ ಎಂದು ಸಿಇಎನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 10 ಲಕ್ಷ ರೂ. ಚಿಟ್ ಫಂಡ್‌ಗೆ ಸೇರಿದ್ದು, ಪ್ರತಿದಿನ 1,500 ರೂ.ಗಳನ್ನು ತನ್ನಿಂದ ವಸೂಲಿ ಮಾಡುತ್ತಿದ್ದರು. ತಿಂಗಳಿಗೊಮ್ಮೆ ಅವರ ಕಚೇರಿಗೆ ಹೋಗಿ ಪಾಸ್ ಬುಕ್ ಅಪ್ ಡೇಟ್ ಮಾಡಿಸಿಕೊಳ್ಳುತ್ತಿದ್ದರು. ಮಾರ್ಚ್ 28, 2021 ರಂದು, ಚಿಟ್ ಫಂಡ್ ಮುಗಿದಿದ್ದು, ಸ್ವಲ್ಪ ಸಮಯದ ನಂತರ ಹಣ ನೀಡುವುದಾಗಿ ಫೈನಾನ್ಸ್ ಮಾಲೀಕರು ತಿಳಿಸಿದ್ದಾರೆ. ಆದರೆ ಈವರೆಗೆ ಹಣ ವಾಪಸ್ ನೀಡದೇ ಕುಂಟು ನೆಪ ಹೇಳುತ್ತಿದ್ದು, ನನಗೆ ಮಾತ್ರವಲ್ಲದೇ ಇತರರಿಗೂ ಸೇರಿ ಒಟ್ಟು ಎರಡು ಕೋಟಿ ರೂಪಾಯಿ ಬಾಕಿ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಸಿಇಎನ್ ಪೊಲೀಸರು ನಡೆಸುತ್ತಿರುವುದಾಗಿ ತಿಳಿದುಬಂದಿದೆ.