(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 06. ದೆಹಲಿಯ ಸುಪ್ರಸಿದ್ದವಾದ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ತಾದ ಹುಲ್ಲುಹಾಸನ್ನು ’ಕರ್ತವ್ಯ ಪಥ್’ ಎಂದು ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೀಗಾಗಿ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ಟಾಗೆ ಮರು ನಾಮಕರಣ ಮಾಡಿದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ಪ್ರದೇಶವನ್ನು ಈಗ ‘ಕರ್ತವ್ಯ ಪಥ್’ ಎಂದು ಕರೆಯಲಾಗುವುದು. ರಾಜ ಎಂದಿರುವುದನ್ನು ಕರ್ತವ್ಯ ಎಂದು ಬದಲಿಸುವ ಮೂಲಕ ಕೇಂದ್ರವು ಇದು ಆಳ್ವಿಕೆ ಮಾಡುವವರ ಕಾಲವಲ್ಲ ಬದಲಾಗಿ ನಿಷ್ಟೆಯಿಂದ ದುಡಿಯುವವರ ಕಾಲ ಎಂದು ಹೇಳಲು ಬಯಸುತ್ತಿರುವುದಾಗಿ ವಿಶ್ಲೇಷಿಸಲಾಗಿದೆ.