ಹಂದಿ ಜ್ವರಕ್ಕೆ ತುಂಬು ಗರ್ಭಿಣಿ ಬಲಿ

(ನ್ಯೂಸ್ ಕಡಬ) newskadaba.com ಮೈಸೂರು, ಸೆ. 01. ತುಂಬು ಗರ್ಭಿಣಿಯೊಬ್ಬರು ಹಂದಿ ಜ್ವರಕ್ಕೆ ಬಲಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.


ಮೃತಪಟ್ಟವರನ್ನು ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬವರ ಪುತ್ರಿ ಛಾಯಾ ಎಂದು ಗುರುತಿಸಲಾಗಿದೆ. ಇವರಿಗೆ 4 ವರ್ಷದ ಗಂಡು ಮಗು ಇದ್ದು, ಇದೀಗ 2ನೇ ಮಗುವಿನ ನಿರೀಕ್ಷೆಯಲ್ಲಿದ್ದ 9 ತಿಂಗಳ ಗರ್ಭಿಣಿ ಛಾಯಾಗೆ ಎಚ್1ಎನ್1 ಸೋಂಕು ತಗುಲಿತ್ತು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top