ನಾಳೆ (ಆ.30) ಮರ್ಧಾಳ ಸೈಂಟ್ ಮೇರಿಸ್ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸೇವಾ ನಿವೃತ್ತಿ ➤‌ ಸಾವಿರಾರು ಶಿಷ್ಯರ ಅಚ್ಚುಮೆಚ್ಚಿನ ಶಿಕ್ಷಕಿಗೆ ಗೌರವಾಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಆ.29. ಸುದೀರ್ಘ 32 ವರ್ಷ 4 ತಿಂಗಳುಗಳ ಕಾಲ ಮರ್ಧಾಳದ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ವಿಜ್ಞಾನ ಟೀಚರ್ ಎಂದೇ ಪ್ರಸಿದ್ಧಿಯನ್ನು ಪಡೆದ ದೇವಕಿ ಕೆ. ಅವರು ನಾಳೆ ಸೇವಾ ನಿವೃತ್ತಿ ಹೊಂದಲಿದ್ದಾರೆ‌.

ಅಪಾರ ಶಿಷ್ಯ ವೃಂದವನ್ನು ಹೊಂದಿರುವ ಇವರಿಗೆ ನಾಳೆ (ಆ.30) ಬೆಳಿಗ್ಗೆ 11.30ಕ್ಕೆ ಶಾಲೆಯ ಸಭಾಂಗಣದಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕ – ರಕ್ಷಕ ವೃಂದ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ವಿದ್ಯಾಭಿಮಾನಿಗಳ ವತಿಯಿಂದ ಗೌರವಾಭಿನಂದನೆ ಕಾರ್ಯಕ್ರಮ ನಡೆಯಲಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

Also Read  ಬೆಳ್ತಂಗಡಿ: ಗಾಂಜಾ ಸಾಗಾಟ ➤ ಆರೋಪಿಗಳಿಬ್ಬರ ಬಂಧನ

error: Content is protected !!
Scroll to Top