ಆ. 07ರಂದು ಬಿಜೆಪಿಗೆ ಎದುರಾಗಿ ಹಿಂದೂಸ್ಥಾನ್ ಜನತಾ ಪಾರ್ಟಿ ಉದಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 06. ರಾಜ್ಯದಲ್ಲಿ ಚುನಾವಣಾ ಕಣ ನಿಧಾನಕ್ಕೆ ರಂಗೇರುತ್ತಿದ್ದು, ಒಂದೆಡೆ ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೇರುವ ಕನಸು ನಡೆಸುತ್ತಿದ್ದರೆ, ಇನ್ನೊಂದೆಡೆ ಹಿಂದುತ್ವದ ಹೋರಾಟಗಾರ ಪ್ರಮೋದ್ ಮುತಾಲಿಕ್ ಹೊಸ ಪಕ್ಷ ಸ್ಥಾಪಿಸುವ ಮುನ್ಸೂಚನೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ನಾಳೆ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಪಕ್ಷ ಹಿಂದೂಸ್ಥಾನ್‌ ಜನತಾ ಪಾರ್ಟಿ (Hindustan Janata Party) ಉದಯವಾಗಲಿದೆ.


ಬಿಜೆಪಿ ಹಾಗೂ ಇತರ ಪಕ್ಷಗಳಿಗೆ ಸೆಡ್ಡು ಹೊಡೆಯುವ ಉದ್ದೇಶದಿಂದ ಹಾಗೂ ಹಿಂದುತ್ವವನ್ನೇ ಅಜೆಂಡವಾಗಿಟ್ಟುಕೊಂಡು ಕೆಲಸ‌ ಮಾಡಲು ಈ ಪಕ್ಷವನ್ನು ಹುಟ್ಟುಹಾಕಲಾಗುತ್ತಿದೆ ಎನ್ನಲಾಗಿದೆ. ಈ ಪಕ್ಷದಲ್ಲಿ ವಿನಾಯಕ್ ಮಾಳದಕರ್ ಅಧ್ಯಕ್ಷರಾಗಿದ್ದು, ಸದ್ಯದಲ್ಲೇ ಇತರ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಕೂಡಾ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಬೆಂಗಳೂರಿನ ಶರಣ ಸೇವಾ ಸಮಾಜದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದ್ದು, ಹೊಸ ಪಾರ್ಟಿಗೆ ಮಠಾಧೀಶರಿಂದಲೇ ಚಾಲನೆ ಸಿಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದ್ದು, 225 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಪಕ್ಷದ ಪ್ರಣಾಳಿಕೆ ಕೂಡ ಸಿದ್ಧವಾಗಿದ್ದು, ಹಿಂದುತ್ವದ ಬೆಳವಣಿಗೆ ಹಾಗೂ ರಕ್ಷಣೆಗೆ ಬದ್ಧ ಎಂದು ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದೆ.

error: Content is protected !!
Scroll to Top