ಚಿರತೆ ಪ್ರತ್ಯಕ್ಷ ➤ ಸಾರ್ವಜನಿಕರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ವಿಟ್ಲ, ಜು. 20. ರಸ್ತೆಯಲ್ಲಿ ತೆರಳುತ್ತಿದ್ದ ಯುವಕನಿಗೆ ಚಿರತೆ ಅಡ್ಡ ಬಂದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯಲ್ಲಿ ನಡೆದಿದೆ.

ಕುಡ್ತಮುಗೇರಿಗೆ ನಡೆದು ಬರುತ್ತಿದ್ದ ಯುವಕನಿಗೆ ನೀರಪಳಿಕೆ ಎಂಬಲ್ಲಿ ಚಿರತೆ ಅಡ್ಡ ಬಂದಿದೆ ಎನ್ನಲಾಗಿದೆ. ಸ್ಥಳದಲ್ಲಿ ಸಾರ್ವಜನಿಕರು ಜಮಾವಣೆಗೊಂಡಿದ್ದು, ಅರಣ್ಯ ಅಧಿಕಾರಿಗಳು ಕೂಡ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಮತ್ತೆ ಚಿರತೆ ಓಡಾಟದಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

 

Scroll to Top