ದ.ಕ. ಜಿಲ್ಲೆಯಲ್ಲಿ ಮಳೆ ಕಡಿಮೆಗೊಂಡ ಹಿನ್ನೆಲೆ ➤ ನಾಳೆ ಶಾಲೆಗಳಿಗೆ ರಜೆ ಇಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು, ಜು‌.12. ಕಳೆದ ಕೆಲವು ದಿನಗಳಿಂದ ಬಿರುಸುಗೊಂಡಿದ್ದ ಮಳೆಯು ಕಡಿಮೆಗೊಂಡಿದ್ದು, ನಾಳೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿರಲಿದೆ.

ಕಳೆದ ಎಂಟು ದಿನಗಳಿಂದ ಶಾಲೆಗಳಿಗೆ ನಿರಂತರವಾಗಿ ರಜೆ ನೀಡಲಾಗಿದ್ದು, ಮಳೆಯ ಪ್ರಮಾಣ ಕಡಿಮೆಗೊಂಡು ರೆಡ್ ಅಲೆರ್ಟ್ ನಿಂದ ಆರೆಂಜ್ ಅಲರ್ಟ್ ಗೆ ಬದಲಾವಣೆಗೊಂಡ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ಎಂದಿನಂತೆ ತರಗತಿ ನಡೆಯಲಿದೆ. ಸ್ಥಳೀಯವಾಗಿ ಸಮಸ್ಯೆಗಳಿದ್ದಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

Also Read  ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಚಾಲಕ ಪಾರು

 

 

error: Content is protected !!
Scroll to Top