ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ➤ ಈ ಮೂಲಕ ಕರಾವಳಿಗೆ ಕೊಡುಗೆ ನೀಡಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com ನವದೆಹಲಿ, ಜು.06. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ನಾಲ್ವರನ್ನು ಕೇಂದ್ರ ಸರಕಾರವು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಧರ್ಮಸ್ಧಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ, ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ, ಮಾಜಿ ಒಲಿಂಪಿಕ್ ಅಥ್ಲೀಟ್ ಪಿ.ಟಿ.ಉಷಾ, ಹಾಗೂ ವಿ.ವಿಜಯೇಂದ್ರ ಪ್ರಸಾದ್ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಹೆಗ್ಗಡೆಯವರನ್ನು ನಾಮ ನಿರ್ದೇಶನಗೊಳಿಸುವ ಮೂಲಕ‌ ದಕ್ಷಿಣ ಕನ್ನಡಕ್ಕೆ ಕೇಂದ್ರ ಸರಕಾರವು ವಿಶೇಷ ಕೊಡುಗೆಯನ್ನು ನೀಡಿದೆ.

Also Read  ಏಳನೇ ಬಾರಿಗೆ ಮತ್ತೆ ಬಿಹಾರ ಸಿಎಂ ಪಟ್ಟ ಅಲಂಕರಿಸಿದ ನಿತೀಶ್​ ಕುಮಾರ್​

 

 

error: Content is protected !!
Scroll to Top