ಅರಂತೋಡು: ಗುಡ್ಡ ಕುಸಿತ ➤ ರಸ್ತೆ ಸಂಚಾರ ಬಂದ್…!

(ನ್ಯೂಸ್ ಕಡಬ) newskadaba.com ಅರಂತೋಡು, ಜು. 06. ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತೊಡಿಕಾನ ಮಾವಿನಕಟ್ಟೆ ಮುತ್ತುಕೋಡಿ ಬಾಳೆಕಜೆ ರಸ್ತೆಗೆ ಗುಡ್ಡ ಕುಸಿದು ಬಿದ್ದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ.

ರಸ್ತೆ ಬಂದ್ ನಿಂದಾಗಿ ತೊಡಿಕಾನ ಗ್ರಾಮದೊಂದಿಗೆ ಸಂಪರ್ಕ ಕಳೆದುಕೊಂಡ ಸ್ಥಳೀಯ ನಿವಾಸಿಗಳು ತೊಂದರೆಗೊಳಗಾಗಿದ್ದು, ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಗಮನಹರಿಸಿ ರಸ್ತೆಗೆ ಬಿದ್ದ ಗುಡ್ಡವನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ಸ್ಥಳೀಯರು ಗ್ರಾಮ ಪಂಚಾಯತ್ ನ ಗಮನಕ್ಕೆ ತಂದಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೂಕ್ತ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Also Read  ಸುಳ್ಯ: ಪ್ರಜ್ಞಾ ಆಶ್ರಮದಲ್ಲಿ ಜ್ಞಾನದೀಪ ಸಂಸ್ಥೆಯಿಂದ ದೀಪಾವಳಿ ಆಚರಣೆ

error: Content is protected !!
Scroll to Top