ಕಡಬ: ತಾಲೂಕು ವಿಕಲಚೇತನರ ವೈದ್ಯಕೀಯ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಜು. 06. ವಿಕಲಚೇತನರ ಕಡಬ ತಾಲೂಕು ಮಟ್ಟದ ವೈದ್ಯಕೀಯ ಶಿಬಿರವು ಕಡಬ ಸರಕಾರಿ ಸಮುದಾಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್‌ ನೇತೃತ್ವದಲ್ಲಿ ನಡೆಯಿತು.

ಎಲುಬು ತಜ್ಞ ಡಾ.ಪದ್ಮನಾಭ ಭಟ್, ಕಣ್ಣಿನ ತಜ್ಞೆ ಅರ್ಚನಾ, ಇಎನ್‌ಟಿ ತಜ್ಞ ಝೈನಬ್ ಸುನು ಅಲಿರವರು ವಿಕಲಚೇತನರನ್ನು ತಪಾಸಣೆ ಮಾಡಿ ಗುರುತಿನ ಚೀಟಿ ನೀಡಿದರು. ಕಡಬ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲಚೇತನ ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಕಡಬ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತೆ ಅಕ್ಷತಾ.ಎ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಆಲಂಕಾರು ಗ್ರಾ.ಪಂ.ನ ಮೋನಪ್ಪ ಬಿ, ಪೆರಾಬೆ ಗ್ರಾ.ಪಂ.ನ ಮುತ್ತಪ್ಪ ಬಿ, ಬಿಳಿನೆಲೆ ಗ್ರಾ.ಪಂ.ನ ವಿಜಯಕುಮಾರ್, ನೂಜಿಬಾಳ್ತಿಲ ಗ್ರಾ.ಪಂ.ನ ಸಜಿತ್, ಶಿರಾಡಿ ಗ್ರಾ.ಪಂ.ನ ಸುನೀಲ್, ಕಾಣಿಯೂರು ಗ್ರಾ.ಪಂ.ನ ಧನಂಜಯ, ಐತ್ತೂರು ಗ್ರಾ.ಪಂ.ನ ಸಂತೋಷ್ ಕುಮಾರ್, ಬೆಳಂದೂರು ಗ್ರಾ.ಪಂ.ನ ಪ್ರಶಾಂತಿ, ಮರ್ದಾಳ ಗ್ರಾ.ಪಂ.ನ ಶಾಂತಾ ಸಿ.ಎಚ್, ಕಡಬ ಪಟ್ಟಣದ ಪ್ರತಿಭಾ, ರಾಮಕುಂಜ ಗ್ರಾ.ಪಂ.ನ ಚೇತನ, ಕೊಂಬಾರು ಗ್ರಾ.ಪಂ.ನ ಶಿಲ್ಪಕಲಾ, ಕೊಯಿಲ ಗ್ರಾ.ಪಂ.ನ ಅತಿಕಮ್ಮ ಮೊದಲಾದವರು ಸಹಕರಿಸಿದರು.

Also Read  ಮೊರಾರ್ಜಿ ವಸತಿ ಶಾಲೆಗಳ ಪ್ರವೇಶಾತಿ ಕೌನ್ಸಿಲಿಂಗ್

error: Content is protected !!
Scroll to Top