ವಿಟ್ಲ: ಉದ್ಯಮಿಯ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆಗೆ ಯತ್ನ ➤ ಸಾರ್ವಜನಿಕರಿಂದ ಗೂಸಾ

(ನ್ಯೂಸ್ ಕಡಬ) newskadaba.com ವಿಟ್ಲ, ಜು. 02. ಉದ್ಯಮಿಯೋರ್ವರ ಮನೆಗೆ ನುಗ್ಗಿ ಕುಡುಕನೋರ್ವ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ವಿಟ್ಲ ಚಂದಳಿಕೆ ಎಂಬಲ್ಲಿ ನಡೆದಿದೆ.

 

ಚಂದಳಿಕೆ ಸಮೀಪದ ರಿಕ್ಷಾ ಡ್ರೈವರ್ ಗಣೇಶ್ ಶೆಟ್ಟಿ ಎಂಬಾತ ಕುಡಿದ ಮತ್ತಿನಲ್ಲಿ ಚಂದಳಿಕೆ ನಿವಾಸಿ ಉದ್ಯಮಿ ನವೀನ್ ಶೆಟ್ಟಿ ಎಂಬವರ ಮನೆಯ ಮುಂದೆ ನಿಂತು ಬೊಬ್ಬೆಹಾಕುತ್ತಿದ್ದು, ಶುಕ್ರವಾರ ಸಂಜೆ 4.50ರ ಹೊತ್ತಿಗೆ ನವೀನ್ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಇದ್ದ ವೇಳೆ ಈ ಕುಡುಕ ಏಕಾಏಕಿ ಮನೆಯೊಳಗೆ ನುಗ್ಗಿ, ಹೆಂಡತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಗಾಬರಿಗೊಂಡ ಮಹಿಳೆಯು ಬೊಬ್ಬೆ ಹೊಡೆದು ಮನೆಯ ಕೋಣೆಯೊಳಗೆ ಓಡಿ ಹೋಗಿ, ತನ್ನ ಗಂಡನಿಗೆ ಫೋನ್ ಮುಖಾಂತರ ವಿಷಯ ತಿಳಿಸಿದ್ದಾರೆ. ನವೀನ್ ಅವರು ತಕ್ಷಣವೇ ಆಸುಪಾಸಿನವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದು, ನೆರೆಹೊರೆಯವರು ಈತನ ಬಳಿ ಧಾವಿಸುವುದನ್ನು ಕಂಡ ಈತ ನವೀನ್ ಅವರಿಗೆ ಜೀವ ಬೆರಿಕೆ ಹಾಕಿ ಹೋಗುತ್ತಿದ್ದ ವೇಳೆ ಸಾರ್ವಜನಿಕರು ಈತನನ್ನು ವಶಕ್ಕೆ ಪಡೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕುರಿತು ಆರೋಪಿ ಗಣೇಶ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸಂಧ್ಯಾ ಕಾಲೇಜಿನಲ್ಲಿ ಬಿ.ಎ. (HEJ), ಬಿ.ಕಾಂ., ಬಿ.ಸಿ.ಎ. ತರಗತಿಗಳಿಗೆ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ಆಹ್ವಾನ

error: Content is protected !!
Scroll to Top