ವಿಟ್ಲ: ಮಾಣಿಯ ನೇರಳಕಟ್ಟೆಯಲ್ಲಿ ಶಕುಂತಳ ಎಂಬ ವಿವಾಹಿತ ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ ಪ್ರಕರಣ ಸಂಬಂಧ ಆರೋಪಿ ಶ್ರೀಧರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಶಕುಂತಳಾ ಅವರ ಪತಿ ಸಂಜೀವ ಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂಜೀವ ಅವರ ಪತ್ನಿ ಶಕುಂತಳ ಸುಮಾರು 5 ವರ್ಷಗಳಿಂದ ಪುತ್ತೂರಿನ ಕೊಂಬೆಟ್ಟು ಇನ್ ಲ್ಯಾಂಡ್ ಕಟ್ಟಡದ ಎದುರಿನಲ್ಲಿರುವ ವಿನಾಯಕ ಎಂಬ ಕ್ಯಾಂಟೀನ್ ವ್ಯವಹಾರ ನಡೆಸುತ್ತಿದ್ದು, ಇತ್ತೀಚೆಗೆ 1 ವರ್ಷದಿಂದ ಸ್ಕೂಟರ್ ನಲ್ಲಿ ಪುತ್ತೂರಿಗೆ ಹೋಗಿ ಬರುತ್ತಿದ್ದು, ಅದಕ್ಕಿಂತ ಮುಂಚೆ ಅನಂತಾಡಿ ಗೋಳಿಕಟ್ಟೆಯ ಲಿಂಗಪ್ಪ ಎಂಬವರ ದೂರದ ಸಂಬಂಧಿಯಾದ ಯಮನಾಜೆಯ ಶ್ರೀಧರ ಎಂಬವನ ಆತನ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದರು. ಸುಮಾರು 1 ವರ್ಷದ ಹಿಂದೆ ಶ್ರೀಧರನು ನಮ್ಮ ಮನೆಯ ಬಳಿಗೆ ಬಂದು ತನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಈತನು ತನ್ನ ಹೆಂಡತಿಯ ಸುದ್ದಿಗೆ ಬಾರದೇ ಇದ್ದು ನಮ್ಮ ಕ್ಯಾಂಟೀನ್ ನ ಬಳಿಯಲ್ಲಿ ಆತನು ಆಟೋ ರಿಕ್ಷಾದಲ್ಲಿ ಹೋಗುವ ಸಮಯ ಗುರಾಯಿಸಿಕೊಂಡು ಹೋಗುತ್ತಿರುವುದಾಗಿಯೂ, ಆತನನ್ನು ಕಂಡರೆ ನನಗೆ ಹೆದರಿಕೆ ಆಗುತ್ತಿದೆ ಎಂಬುದಾಗಿ ನನ್ನಲ್ಲಿ ಹೇಳುತ್ತಿದ್ದಳು ಎಂದು ಪತಿ ಸಂಜೀವ ದೂರಿನಲ್ಲಿ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 3.25 ಗಂಟೆಗೆ ಅನಂತಾಡಿಯ ಸಂತೋಷ್ ಎಂಬಾತನು ಸಂಜೀವ ಅವರಿಗೆ ಫೋನು ಮಾಡಿ ಹೆಂಡತಿ ಶಕುಂತಳರವರಿಗೆ ಕೊಡಾಜೆಯಲ್ಲಿ ಆಟೋರಿಕ್ಷಾ ಚಾಲಕನೊಬ್ಬ ಚೂರಿಯಿಂದ ಹೊಟ್ಟೆಗೆ ಹಾಗೂ ದೇಹದ ಇತರ ಭಾಗಕ್ಕೆ ತಿವಿದು ಗಾಯಗೊಳಿಸಿದ್ದು ಆಕೆಯನ್ನು ಮಾಣಿಯಿಂದ ಅಂಬ್ಯಲೆನ್ಸ್ ನವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ತಿಳಿದು ಸಂಜೀವ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ಹೆಂಡತಿಯ ಮುಖ, ಕೈಹೊಟ್ಟೆ, ತಲೆಯ ಭಾಗ ಹಾಗೂ ದೇಹದ ಇತರ ಕಡೆಗಳಲ್ಲಿ ರಕ್ತಗಾಯವಾಗಿ ವಿಪರೀತ ರಕ್ತಸ್ರಾವವಾಗಿ ಮಧ್ಯಾಹ್ನ 3.30 ಗಂಟೆ ಸಮಯಕ್ಕೆ ಮೃತಪಟ್ಟಿರುವುದಾಗಿ ವೈಧ್ಯರು ತಿಳಿಸಿದ್ದಾರೆ. ಆರೋಪಿ ಶ್ರೀಧರನು ಆಟೋವನ್ನು ಪುತ್ತೂರಿನಲ್ಲಿ ಚಲಾಯಿಸುವುದನ್ನು ಸಂಜೀವರವರು ಹೆಚ್ಚಾಗಿ ನೋಡಿದ್ದು, ತನ್ನ ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಚೂರಿಯಿಂದ ತಿವಿದು ಕೊಲೆ ಮಾಡಿರುವುದಾಗಿದ್ದು ಆರೋಪಿ ಶ್ರೀಧರನ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.