ವಿಟ್ಲ: ಪಾರ್ಕ್ ಮಾಡಿದ್ದ ಲಾರಿ ಪಲ್ಟಿ ➤ ಚಾಲಕ ಪಾರು

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 27. ಪಾರ್ಕ್‌ ಮಾಡಿದ್ದ ಲಾರಿಯೊಂದು ಮಗುಚಿ ಬಿದ್ದ ಘಟನೆ ವಿಟ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ನಡೆದಿದೆ.

ಕಲ್ಲು ತುಂಬಿದ್ದ ಲಾರಿಯನ್ನು ಚಾಲಕ ಪಾರ್ಕ್‌ ಮಾಡಿ ಚಹಾ ಕುಡಿಯಲೆಂದು ತೆರಳಿದ್ದ ವೇಳೆ ಲಾರಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಹಾನಿ ಸಂಭವಿಸಿಲ್ಲ. ಕಳೆದೆರಡು ಮೂರು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಣ್ಣು ಕುಸಿದು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

Scroll to Top